ಮೈಸೂರು

ಶ್ರೀ ಜಯಚಾಮರಾಜ ಕೃತ ಶ್ರೀವಿದ್ಯಾ ಸಂಕೀರ್ತನ ಸುಧಾಲಹರೀ ಕೃತಿ ಸಾರ್ವಜನಿಕರಿಗೆ ಲಭ್ಯವಿದೆ : ಪ್ರಮೋದಾದೇವಿ ಒಡೆಯರ್ ಮಾಹಿತಿ

ಮೈಸೂರು,ಫೆ.18:- ಶ್ರೀ ಜಯಚಾಮರಾಜ ಕೃತ ಶ್ರೀವಿದ್ಯಾ ಸಂಕೀರ್ತನ ಸುಧಾಲಹರೀ ಶೀರ್ಷಿಕೆಯಡಿ ಕೃತಿ ಹೊರತರಲಾಗಿದ್ದು, ಅರಮನೆಯಿಂದಲೇ ಪುಸ್ತಕ ಪ್ರಕಟಣೆಗೊಂಡಿದ್ದು ಸಾರ್ವಜನಿಕರಿಗೆ ಲಭ್ಯವಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ಅರಮನೆಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು  ಶ್ರೀ ಜಯ ಚಾಮರಾಜ ಒಡೆಯರ್ ಸಂಗೀತ ಕೃತಿಗಳಿಗೆ ಪುಸ್ತಕ ರೂಪ ನೀಡಲಾಗಿದೆ ಎಂದರು.  ಜಯಚಾಮರಾಜ ಒಡೆಯರ್ ವಿರಚಿತ 97 ಕೃತಿಗಳನ್ನು ಒಳಗೊಂಡಿರುವ ಕೃತಿ  ಇದಾಗಿದ್ದು ಹಿರಿಯ ವಿದ್ವಾಂಸ ಚನ್ನಕೇಶವಯ್ಯ ಸಂಪಾದನೆ ಮಾಡಿದ್ದಾರೆ. ದೇವನಾಗರಿ, ಕನ್ನಡದಲ್ಲಿದೆ.  1947 ರಿಂದ 1952ರ ಅವಧಿಯಲ್ಲಿ ಜಯ ಚಾಮರಾಜ ಒಡೆಯರ್ ಕೃತಿಗಳನ್ನು ರಚಿಸಿದ್ದರು. ಅವುಗಳನ್ನು ಸಂರಕ್ಷಣೆ ಮಾಡಿ ಪುಸ್ತಕ ರೂಪ ನೀಡಲಾಗಿದೆ. 500 ಪುಟಗಳ ಕೃತಿಯ ಬೆಲೆ 900 ರೂ. ಅರಮನೆ, ಜಗನ್ಮೋಹನ ಅರಮನೆಯಲ್ಲಿ ಲಭ್ಯವಿದೆ ಎಂದರು. ಇ- ಬುಕ್ ಮಾಡುವ ಉದ್ದೇಶವಿದೆ.  ಈಗಾಗಲೇ ಪ್ರಕ್ರಿಯೆ ಚಾಲನೆಯಲ್ಲಿದ್ದು ಶೀಘ್ರದಲ್ಲೇ ಅಪ್‌ಲೋಡ್ ಮಾಡಲಾಗುವುದು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: