ಪ್ರಮುಖ ಸುದ್ದಿ

ಕ್ವೀನ್ ಆಫ್ ಕಾಟ್ವೆ ಚಿತ್ರದ ಬಾಲ ಕಲಾವಿದೆ ನಿಕಿತಾ ಪರ್ಲ್ ವಲಿಗ್ವಾ ನಿಧನ

ದೇಶ(ನವದೆಹಲಿ)ಫೆ.18:- ‘ಕ್ವೀನ್ ಆಫ್ ಕಾಟ್ವೆ’ ಚಿತ್ರದ ಬಾಲ ಕಲಾವಿದೆ ನಿಕಿತಾ ಪರ್ಲ್ ವಲಿಗ್ವಾ 15 ನೇ ವಯಸ್ಸಿನಲ್ಲಿಯೇ ನಿಧನರಾಗಿದ್ದಾರೆ.

ವಲಿಗ್ವಾ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದರು.  ಉಗಾಂಡಾದ ಪ್ರತಿಭಾವಂತ ಚೆಸ್ ಆಟಗಾರ್ತಿ ಫಿಯೋನಾ ಮುಟ್ಸಿ ಅವರ ಜೀವನವನ್ನು ಆಧರಿಸಿದ 2016 ರಲ್ಲಿ ತೆರೆ ಕಂಡ  ‘ಕ್ವೀನ್ ಆಫ್ ಕಾಟ್ವೆ’ ಚಿತ್ರವನ್ನು ಭಾರತೀಯ-ಅಮೇರಿಕನ್ ನಿರ್ದೇಶಕಿ ಮೀರಾ ನಾಯರ್ ನಿರ್ದೇಶಿಸಿದ್ದರು. ಬಾಲ ಕಲಾವಿದ ವಲಿಗ್ವಾ ಅವರ ಸಾವಿನ ಬಗ್ಗೆ ನಾಯರ್ ಸಂತಾಪ  ವ್ಯಕ್ತಪಡಿಸಿದ್ದಾರೆ.

ಅವರು ಟ್ವೀಟರ್ ನಲ್ಲಿ  ” ಪ್ರಿಯ ನಿಕಿತಾ ವಿದಾಯ,  ಇಷ್ಟು ಬೇಗ, ಇಷ್ಟು ಚಿಕ್ಕ ವಯಸ್ಸಿನಲ್ಲಿ  ನೀವು ನಮ್ಮಿಂದ ದೂರವಾಗಿರುವುದು ನಮ್ಮ ಹೃದಯಕ್ಕೆ ನೋವಾಗಿದೆ. ನೀವು ಖಾಯಿಲೆಯ ವಿರುದ್ಧ ತುಂಬಾ ಹೋರಾಡಿದ್ದೀರಿ, ಆದರೆ ಈ ರೋಗಕ್ಕೆ ಚಿಕಿತ್ಸೆ ಸಾಧ್ಯವಾಗಲಿಲ್ಲ. ನಿಮ್ಮ ಬೆಳಕು ಕಾಟ್ವೆ ಚಿತ್ರದ  ಮೂಲಕ ಉರಿಯುತ್ತಲೇ ಇರುತ್ತದೆ’ ಎಂದಿದ್ದಾರೆ.

ವಲಿಗ್ವಾ ಅವರ ಮೆದುಳಿನಲ್ಲಿ ಟ್ಯೂಮರ್ ಇರುವುದನ್ನು 2016 ರಲ್ಲಿ ಪತ್ತೆ ಮಾಡಲಾಯಿತು. ಭಾರತದಲ್ಲಿ ಚಿಕಿತ್ಸೆ ನೀಡಲಾಯಿತು. ಒಂದು ವರ್ಷದ ನಂತರ ಅವರ ಸ್ಥಿತಿ ಸುಧಾರಿಸಿತು, ಆದರೆ 2019 ರಲ್ಲಿ ಈ ರೋಗವು ಮತ್ತೆ ಕಾಣಿಸಿಕೊಂಡಿತು.

‘ಕ್ವೀನ್ ಆಫ್ ಕಾಟ್ವೆ’ ನಿರ್ದೇಶಕಿ ಮೀರಾ ನಾಯರ್ ಅವರ ಚಿಕಿತ್ಸೆಗೆ   ಹಣವನ್ನು ಸಂಗ್ರಹಿಸಲು ಸಹಾಯ ಮಾಡಿದರು. 2017 ರಲ್ಲಿ, ವೆಲಿಗ್ವಾ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆಂದು   ವರದಿಯಾಗಿತ್ತು.  ಆದರೆ ಕಳೆದ ವರ್ಷ ಮತ್ತೊಂದು ಟ್ಯೂಮರ್ ಪತ್ತೆಯಾಗಿದೆ ಎನ್ನಲಾಗಿತ್ತು. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: