ಮೈಸೂರು

ವಿದ್ಯಾರಣ್ಯಪುರಂನಲ್ಲಿರುವ ಕಸದ ಎಕ್ಸೆಲ್ ಪ್ಲ್ಯಾಂಟ್‌ ನಲ್ಲಿ ಅಗ್ನಿ ಆಕಸ್ಮಿಕ : ಕಸದ ರಾಶಿ ಭಸ್ಮ

ಮೈಸೂರು,ಫೆ.18:- ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಕಸದ ಎಕ್ಸೆಲ್ ಪ್ಲ್ಯಾಂಟ್‌ ನಲ್ಲಿ ಕಸದ ರಾಶಿಗೆ ಬೆಂಕಿ‌ ಕಾಣಿಸಿಕೊಂಡು 3ಕ್ಕೂ ಹೆಚ್ಚು ಎಕರೆಗೆ ವಿಸ್ತರಿಸಿದ್ದ ಕಸದ ರಾಶಿ ಬೆಂಕಿಗೆ ಆಹುತಿಯಾಗಿದೆ.

ಮೊದಲಿಗೆ ಬೆಂಕಿ ಅವಘಡ ಸಂಭವಿಸಿದೆ ಎಂದು ಕೆ.ಆರ್.ಕ್ಷೇತ್ರದ ಶಾಸಕರಾದ ಎಸ್.ಎ.ರಾಮದಾಸ್ ಅವರ ಕಚೇರಿಗೆ ಕರೆ ಬಂದ ಕೂಡಲೇ ಪಾಲಿಕೆ ಅಧಿಕಾರಿಗಳು ಸೇರಿದಂತೆ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಸ್ಥಳಕ್ಕೆ ಬರುವಂತೆ ಶಾಸಕರ ಕಚೇರಿಯಿಂದ ಕರೆ ಮಾಡಿ ಸೂಚಿಸಲಾಯಿತು.

ಅದರಂತೆ ಸರಿಯಾದ ಸಮಯಕ್ಕೆ ಬಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೆಂಕಿ ನಂದಿಸಲು ಕಾರ್ಯೋನ್ಮುಖರಾದರು. ಈ ವೇಳೆ  ಕಸದ ರಾಶಿ ಸುಟ್ಟು ಹೋಗಿದ್ದು, ಮತ್ತಷ್ಟು ಹಾನಿಯಾಗುವುದನ್ನ ತಪ್ಪಿಸಲಾಗಿದೆ. ಅನಾರೋಗ್ಯದ ಕಾರಣ ಶಾಸಕರಾದ ರಾಮದಾಸ್ ಅವರು ಸ್ಥಳಕ್ಕೆ ಬರಲು ಸಾಧ್ಯವಾಗದೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಪ್ತ ಸಹಾಯಕ ಕೃಷ್ಣ ಅವರ ಮೂಲಕ ಸೂಚಿಸಲಾಗಿತ್ತು. ಅದರಂತೆ ಉಳಿದ ಕೆಲಸವನ್ನು ಸಿಬ್ಬಂದಿಗಳು ಅಧಿಕಾರಿಗಳ ಸಮ್ಮುಖದಲ್ಲಿ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: