ಪ್ರಮುಖ ಸುದ್ದಿ

ಮಾನಭಂಗ ಯತ್ನ ಆರೋಪ ಸತ್ಯಕ್ಕೆ ದೂರವಾಗಿದೆ : ಸಹೋದರರ ಸ್ಪಷ್ಟನೆ

ರಾಜ್ಯ( ಮಡಿಕೇರಿ) ಫೆ.18 :- ಎಮ್ಮೆಮಾಡು ತಾಜುಲ್ಲಾ ಇಸ್ಲಾಂ ಜಮಾಅತ್‍ನ ಅಧ್ಯಕ್ಷರಾಗಿರುವ ಕೆ.ಎಸ್.ಅಬ್ದುಲ್ ಖಾದರ್ ಹಾಜಿ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಮಾನಭಂಗ ಯತ್ನದ ಆರೋಪವನ್ನು ಹೊರಿಸಲಾಗಿದೆ ಎಂದು ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು, ಎಂದು ಅಬ್ದುಲ್ ಖಾದರ್ ಅವರ ಸಹೋದರ ಕೆ.ಎಸ್.ಅಬೂಬಕ್ಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಿತ ಜಮಾಅತ್‍ನ ಅಧ್ಯಕ್ಷರಾಗಿರುವ ಕೆ.ಎಸ್.ಅಬ್ದುಲ್ ಖಾದರ್ ಅವರು ತಮ್ಮ ಮನೆಯ ಮೇಲಂತಸ್ತನ್ನು ಮಾಸಿಕ ರೂ.2 ಸಾವಿರದಂತೆ ಬಾಡಿಗೆಗೆಂದು ಷರೀಫ್ ಎಂಬುವವರಿಗೆ ನೀಡಿದ್ದರು. ಕಳೆದ ಏಳು ವರ್ಷಗಳಿಂದ ಷರೀಫ್, ಅವರ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಿದ್ದಾರೆ. ಆದರೆ ಇತ್ತೀಚೆಗೆ ಏಳು ತಿಂಗಳಿನಿಂದ ಬಾಡಿಗೆ ಹಣ ನೀಡದೆ ಸತಾಯಿಸುತ್ತಿದ್ದಾರೆ, ಇದೀಗ ಮಾನಭಂಗ ಯತ್ನದ ಆರೋಪ ಮಾಡುತ್ತಿದ್ದಾರೆ ಎಂದು ಅಬೂಬಕ್ಕರ್ ಆರೋಪಿಸಿದರು.
ಕೆ.ಎಸ್.ಅಬ್ದುಲ್ಲ ಖಾದರ್ ಹಾಜಿ ಅವರಿಗೆ ಸೊಂಟದಲ್ಲಿ ಗಾಯವಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಕಳೆದ ಒಂದು ತಿಂಗಳಿನಿಂದ ತಮ್ಮ ಮಗಳ ವಿವಾಹ ಸಮಾರಂಭಕ್ಕಾಗಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ನಿ ಹಾಗೂ ಮಗಳು ಸದಾ ಮನೆಯಲ್ಲೇ ಇರುತ್ತಾರೆ, ಆದರೂ ಊಟ ನೀಡಲು ಬಂದಾಗ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಶುದ್ಧ ಸುಳ್ಳು ಹೇಳಿರುವುದಾಗಿ ಅಬೂಬಕ್ಕರ್ ಅಸಮಾಧಾನ ವ್ಯಕ್ತಪಡಿಸಿದರು.
ಹಾಜಿ ಅವರು ಉತ್ತಮ ಗುಣದೊಂದಿಗೆ ಜನ ಮನ್ನಣೆ ಪಡೆದಿದ್ದಾರೆ. ಇದೀಗ ಎಮ್ಮೆಮಾಡು ಉರೂಸ್ ಸಮೀಪಿಸುತ್ತಿರುವುದರಿಂದ ಇವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಮಹಿಳೆ ಹಾಗೂ ಆಕೆಯ ಕುಟುಂಬದ ಸದಸ್ಯರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಅಬೂಬಕ್ಕರ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮತ್ತೊಬ್ಬ ಸಹೋದರ ಅಬ್ದುಲ್ ಮಜೀದ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: