ಕರ್ನಾಟಕಪ್ರಮುಖ ಸುದ್ದಿ

ದಾವಣಗೆರೆಯಲ್ಲಿ ಯೋಗೇಶ್ ಮಾಸ್ಟರ್ ಮೇಲೆ ಮಸಿ ಸುರಿದ ದುಷರ್ಮಿಗಳು

ದಾವಣಗೆರೆ : ಲಂಕೇಶ್‌ ಅವರ ಜನ್ಮದಿನ ಕಾರ್ಯಕ್ರಮಕ್ಕೆ ಬಂದಿದ್ದ ವಿವಾದಾತ್ಮಕ ಸಾಹಿತಿ ಯೋಗೇಶ್ ಮಾಸ್ಟರ್ ಅವರ ಮೇಲೆ ದುಷ್ಕರ್ಮಿಗಳು ಮಸಿ ಸುರಿದು ಅವಮಾನ ಮಾಡಿರುವ ಘಟನೆ ನಡೆದಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಲಂಕೇಶ್‌–82’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಇಲ್ಲಿನ ಎಂ.ಸಿ.ಸಿ ‘ಬಿ’ ಬ್ಲಾಕ್‌ನಲ್ಲಿರುವ ಹೋಟೆಲ್‌ಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಯೋಗೇಶ್‌ ಅವರ ಮೇಲೆ ಕಪ್ಪು ಬಣ್ಣವನ್ನು ಎರಚಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ನಡೆದ ಬಳಿಕ ಕನ್ನಡ ಭವನಕ್ಕೆ ವಾಪಸಾದ ಯೋಗೇಶ್‌ ಅವರು ಮತ್ತೆ ವೇದಿಕೆ ಏರಿ ಘಟನೆ ಬಗ್ಗೆ ಮಾಹಿತಿ ನೀಡಿದರು. ‘ದುಷ್ಕರ್ಮಿಗಳು ನನ್ನ ಚಲನವಲನ ಗಮನಿಸುತ್ತಿದ್ದರು. ಏಕಾಏಕಿ ಬಂದು ಬಣ್ಣ ಎರಚಿದರು. ಅವರು ನನ್ನ ಕಣ್ಣುಗಳಿಗೆ ಹಾನಿ ಮಾಡುವ ಉದ್ದೇಶ ಹೊಂದಿದ್ದರು. ಈ ಬಣ್ಣದಲ್ಲಿ ಹಾನಿಕಾರಕ ರಾಸಾಯನಿಕ ಮಿಶ್ರಣ ಮಾಡಿದ್ದರಿಂದ ಮೈ ಉರಿಯಾಗುತ್ತಿದೆ. ಕಣ್ಣು ತೆರೆಯಲು ಬಹಳ ಹೊತ್ತು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡರು.

(ಎಸ್.ಎನ್/ಎನ್.ಬಿ.ಎನ್)

Leave a Reply

comments

Related Articles

error: