
ಮೈಸೂರು
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 67ನೇ ಜನ್ಮದಿನಾಚರಣೆ: ಫೇಸ್ಬುಕ್ ನಲ್ಲಿ ಶುಭಕೋರಿದ ಯದುವೀರ್
ಮೈಸೂರು,ಫೆ.20-ಇಂದು ಮೈಸೂರು ಮಹಾರಾಜ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ 67ನೇ ಜನ್ಮದಿನಾಚರಣೆ. ಒಡೆಯರ್ ಅವರ ಫೋಟೋವನ್ನು ಫೇಸ್ ಬುಕ್ನಲ್ಲಿ ಹಾಕಿಕೊಂಡು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶುಭ ಕೋರಿದ್ದಾರೆ.
ನಮ್ಮ ತಂದೆಯವರಾದ ಪರಮ ಪೂಜ್ಯ ಮಹಾರಾಜ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರವರ 67 ನೇ ಜನ್ಮವಾರ್ಷಿಕೋತ್ಸವದಂದು ಅವರನ್ನು ಸ್ಮರಿಸುತ್ತಿದ್ದೇವೆ. ಶ್ರೀಮನ್ ಮಹಾರಾಜರು ಮೃದು ಸ್ವಭಾವದವರೂ, ಪಂಡಿತರೂ, ಎಲ್ಲರಿಗೂ ಆತ್ಮೀಯರೂ ಹಾಗೂ ಕುಟುಂಬಸ್ಥರಿಗೆ ಉತ್ತಮ ಸಲಹೆದಾರರಾಗಿದ್ದರು ಎಂದು ಬರೆದುಕೊಂಡಿದ್ದಾರೆ. (ಕೆ.ಎಸ್, ಎಂ.ಎನ್)