ಮೈಸೂರು

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನ್ಮದಿನಾಚರಣೆ

ಮೈಸೂರು,ಫೆ.20-ಮೈಸೂರು ಮಹಾರಾಜ ದಿವಗಂತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜನ್ಮದಿನಾಚರಣೆಯನ್ನು ಅರಮನೆ ಮಂಡಳಿಯಲ್ಲಿ ಶ್ರೀ ನಾಲ್ವಡಿ ಫೌಂಡೇಶನ್ ವತಿಯಿಂದ ಆಚರಿಸಲಾಯಿತು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರನ್ನು ಸ್ಮರಿಸಲಾಯಿತು.

ಈ ವೇಳೆ ಮಾತನಾಡಿದ ಅರಮನೆ ಮಂಡಳಿ ಉಪನಿರ್ದೇಶಕರಾದ ಟಿ‌.ಎಸ್ ಸುಬ್ರಹ್ಮಣ್ಯ, ಮೈಸೂರು ಅರಮನೆ ಹಾಗೂ ಮೈಸೂರು ಸಂಸ್ಥಾನ ಕೊಟ್ಟಂತಹ ಕೊಡುಗೆ ಅಪಾರವಾದುದ್ದು. ಒಡೆಯರ್ ಅವರ ವೈಚಾರಿಕತೆ, ಸರಳತೆ  ಮತ್ತು ದೈವ ಭಕ್ತಿ ಎಲ್ಲರಿಗೂ ಮಾದರಿಯಾಗಿದ್ದು, ಪ್ರತೀ ವರ್ಷವು ನಾವು ಅವರ ಹುಟ್ಟುಹಬ್ಬದವನ್ನು ಅಚರಿಸುತ್ತಿದ್ದೇವೆ. ಅವರ ಕುಟುಂಬ ವರ್ಗಕ್ಕೆ ಅಯುರ್ ಅರೋಗ್ಯ ಕರುಣಿಸಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಫೌಂಡೇಶನ್ ಅಧ್ಯಕ್ಷ ನಂದೀಶ್ ಅರಸ್, ಸಮಾಜ ಸೇವಕ ಡಾ.ಕೆ.ರಘುರಾಮಯ್ಯ ವಾಜಪೇಯ್, ಕನ್ನಡ ಹೋರಾಟಗಾರ ರಾಮೇಗೌಡ, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರವಿಂದ್ ಶರ್ಮಾ, ಕರ್ನಾಟಕ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ, ಬಿ.ವಿ.ಎಸ್ ಜಿಲ್ಲಾಧ್ಯಕ್ಷ ಸೋಸಲೆ ಸಿದ್ಧರಾಜು, ಸಮಾಜ ಸೇವಕ ಡಾ.ಬಸವರಾಜು, ಟಿ.ಕೆ ಸುಬ್ರಹ್ಮಣ್ಯರಾಜೇ ಅರಸ್ ಉಪಸ್ಥಿತರಿದ್ದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: