ಕರ್ನಾಟಕಪ್ರಮುಖ ಸುದ್ದಿ

ಪಾಕ್ ಪರ ಘೋಷಣೆ ಕೂಗಿದವರ ನಾಲಿಗೆ ಕತ್ತರಿಸಿದವರಿಗೆ 3 ಲಕ್ಷ ರೂ. ಬಹುಮಾನ: ಆಂದೋಲ ಮಠದ ಸಿದ್ಧಲಿಂಗ ಸ್ವಾಮೀಜಿ

ಗದಗ,ಫೆ.20-`ಪಾಕಿಸ್ತಾನ್ ಜಿಂದಾಬಾದ್’ ಎಂದ ಮೂವರು ಯುವಕರ ನಾಲಿಗೆಯನ್ನು ಕತ್ತರಿಸಿ ತಂದವರಿಗೆ 3 ಲಕ್ಷ ರೂ. ಬಹುಮಾನ ಕೊಡುವುದಾಗಿ ಆಂದೋಲ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.

ಬುಧವಾರ ನಗರದ ಮುನ್ಸಿಪಲ್‌ ಮೈದಾನದಲ್ಲಿ ಶ್ರೀರಾಮ ಸೇನೆ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ 393 ನೇ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನ್‌ ಜಿಂದಾಬಾದ್‌ ಅನ್ನೋದಕ್ಕೆ ಇದು ಇಮ್ರಾನ್‌ ಖಾನ್‌ ದೇಶ ಅಲ್ಲ. ಇದು ಛತ್ರಪತಿ ಶಿವಾಜಿ, ನರೇಂದ್ರ ಮೋದಿ ರಾಷ್ಟ್ರ. ಇಲ್ಲಿ ಪಾಕಿಸ್ತಾನ್‌ ಮುರ್ದಾಬಾದ್‌ ಘೋಷಣೆ ಮೊಳಗಬೇಕು. ದೇಶದ ಅನ್ನ ತಿಂದು, ಪ್ರಧಾನ ಮಂತ್ರಿಗಳ ಸಹಾಯ ಪಡೆದು ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಮೂವರು ಮತಾಂಧರಿಗೆ ಎರಡು ಗಂಟೆಯಲ್ಲಿ ಜಾಮೀನು ಮಂಜೂರು ಮಾಡಿರುವುದನ್ನು ಶ್ರೀರಾಮಸೇನೆ ಉಗ್ರವಾಗಿ ಖಂಡಿಸುತ್ತದೆ ಎಂದರು.

ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನಲ್ಲಿ ಮೂವರು ಕಾಶ್ಮೀರಿ ಯುವಕರು ಪಾಕಿಸ್ತಾನ್‌ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ದೇಶ ವಿರೋಧಿ ಆರೋಪದ ಮೇರೆಗೆ ಯುವಕರನ್ನು ಬಂಧಿಸಿದ್ದರು. ಇದೀಗ ಅವರಿಗೆ ಸ್ಟೇಷನ್ ಬೇಲ್ ನೀಡಲಾಗಿದೆ. (ಎಂ.ಎನ್)

Leave a Reply

comments

Related Articles

error: