ಮೈಸೂರು

ಉಚಿತ ಸರಳ ಸಾಮೂಹಿಕ ವಿವಾಹ: ಪ್ರಚಾರ ರಥಕ್ಕೆ ಚಾಲನೆ

ಮೈಸೂರು,ಫೆ.20-ರಾಜ್ಯ ಸರ್ಕಾರದಿಂದ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದರ ಪ್ರಚಾರ ರಥಕ್ಕೆ ಇಂದು ಚಾಲನೆ ನೀಡಲಾಯಿತು.

ಅರಮನೆ ಆವರಣದಲ್ಲಿ ಸಪ್ತಪದಿ ಪ್ರಚಾರ ವಾಹನಕ್ಕೆ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಪ್ರಚಾರ ವಾಹನ ಮೈಸೂರು ಜಿಲ್ಲೆಯಾದ್ಯಂತ ಸಂಚರಿಸಲಿದೆ.

ಏಪ್ರಿಲ್ 26 ರಂದು ಚಾಮುಂಡಿ ಬೆಟ್ಟ, ಮುಡುಕುತೊರೆ ನಂಜನಗೂಡು ದೇವಸ್ಥಾನದಲ್ಲಿ ಮೊದಲ ಸಾಮೂಹಿಕ ವಿವಾಹ ನಡೆಯಲಿದೆ. ಮಾರ್ಚ್ 27 ನೋಂದಣಿಗೆ ಕೊನೆಯ ದಿನವಾಗಿದೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: