ಮೈಸೂರು

ಫೆ. 23 ರಂದು ಸಂಗೀತ ಸಂಜೆ

ಮೈಸೂರು,ಫೆ.20- ಸಂಗೀತ ಸಾಮ್ರಾಟ್, ವಿಶ್ವಗಾಯಕ ಮೊಹಮ್ಮದ್ ರಫೀ-ನೆನಪು ಹಿಂದಿ ಚಲನಚಿತ್ರ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮವನ್ನು ಫೆ.23 ರಂದು ಆಯೋಜಿಸಲಾಗಿದೆ ಎಂದು ಡಾ.ಪ್ರೀತಮ್ ರಾಘವೇಂದ್ರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6.15ಕ್ಕೆ ಪುರಭವನದಲ್ಲಿ ಜೂ.ಮೊಹಮ್ಮದ್ ರಫೀ ರಾಘವೇಂದ್ರ ರತ್ನಾಕರ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಹಕಾರಿ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್, ಸಮಾಜ ಸೇವಕ ಡಾ.ರಘುರಾಂ ವಾಜಪೇಯಿ, ಹಿರಿಯ ಸಮಾಜ ಸೇವಕ ಡಾ.ಬಿ.ಆರ್.ನಟರಾಜ್ ಜೋಯಿಸ್, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಇತರರು ಆಗಮಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ರತ್ನಾಕರ್, ಶ್ರೇಷ್ಣ ಕೆ.ರಾಘ್, ಮ.ನಾ.ಲತಾಮೋಹನ್ ಉಪಸ್ಥಿತರಿದ್ದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: