ಮೈಸೂರು

ಫೆ. 24 ರಂದು ರಂಗಕರ್ಮಿ ಶ್ರೀ ರಾಜಶೇಖರ ಕದಂಬ 75ನೇ ವರ್ಷದ ಅಭಿನಂದನಾ ಸಂಭ್ರಮ

ಮೈಸೂರು,ಫೆ.20-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ.24 ರಂದು ರಂಗಕರ್ಮಿ ಶ್ರೀ ರಾಜಶೇಖರ ಕದಂಬ 75ನೇ ವರ್ಷದ ಅಭಿನಂದನಾ ಸಂಭ್ರಮ ಮತ್ತು ಕದಂಬ 75 ಚಿತ್ರ ಸಂಪುಟ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5.30ಕ್ಕೆ ಕಿರುರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ರಂಗಕರ್ಮಿ ರಾಜಶೇಖರ ಕದಂಬ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಅಭಿನಂದಿಸಲಿದ್ದಾರೆ ಎಂದರು.

ಕದಂಬ 75 ಚಿತ್ರ ಸಂಪುಟ ಕೃತಿಯನ್ನು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಬಿಡುಗಡೆಗೊಳಿಸಲಿದ್ದಾರೆ. ಡಿ.ಮಧು, ಎಸ್.ಧನಂಜಯ ನಿರ್ಮಾಣದ ರಂಗಸಿಂಧು ಕದಂಬ ಸಾಕ್ಷ್ಯಚಿತ್ರವನ್ನು ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಬಿಡುಗಡೆ ಮಾಡಲಿದ್ದಾರೆ. ರಂಗ ತಜ್ಞ ಪ್ರೊ.ಸಿ.ವಿ.ಶ್ರೀಧರಮೂರ್ತಿ ಅಭಿನಂದಿತರ ಪರಿಚಯ ಮಾಡಿಕೊಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಚಂದ್ರಶೇಖರ್, ಎಸ್.ರಾಮಪ್ರಸಾದ್, ಮ.ನ.ಲತಾಮೋಹನ್, ಮಡ್ಡಿಕೆರೆ ಗೋಪಾಲ್ ಉಪಸ್ಥಿತರಿದ್ದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: