ಮೈಸೂರು

ಫೆ. 24 ರಂದು 11ನೇ ಉಚಿತ ಜ್ಯೌತಿರ್ವಿಜ್ಞಾನ, ವಾಸ್ತು ಕಾರ್ಯಾಗಾರ

ಮೈಸೂರು,ಫೆ.20-ಶ್ರೀಲಗಧ ಮಹರ್ಷಿ ಜ್ಯೌತಿರ್ವಿಜ್ಞಾನ ಸಂಶೋಧನಾ ಸಂಸ್ಥೆ ವತಿಯಿಂದ ಫೆ. 24 ರಂದು 11ನೇ ಉಚಿತ ಜ್ಯೌತಿರ್ವಿಜ್ಞಾನ, ವಾಸ್ತು ಕಾರ್ಯಾಗಾರ, ಶಾರ್ವರಿ ನಾಮ ಸಂವತ್ಸರದ ಶ್ರೀ ಲಗಧ ಮಹರ್ಷಿ ಜ್ಯೌತಿರ್ವಿಜ್ಞಾನ ವಾರ್ಷಿಕ ಪಂಚಾಂಗ ಲೋಕಾರ್ಪಣಾ, ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಚಂದ್ರಶೇಖರ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಪ್ರಸಿದ್ಧ ಜ್ಯೌತಿಷಿ ಮತ್ತು ಪಂಚಾಂಗಕರ್ತ ಡಾ.ಜಿ.ಬಿ ಅಮರೇಶ ಶಾಸ್ತ್ರೀ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ವಿಜಯಪುರ ಜಿಲ್ಲೆಯ ಆಲನಮಟ್ಟಿ ಅಸಿಸ್ಟೆಂಟ್ ಕಮಿಷನರ್ ಎ.ಇ.ರಘು, ಹುಣಸೂರಿನ ಸಹ ಶಿಕ್ಷಕಿ ಎಚ್.ಕೆ.ಕವಿತಾ ಉದ್ಘಾಟಿಸಲಿದ್ದಾರೆ ಎಂದರು.

ಪಂಚಾಂಗವನ್ನು ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಜೆ.ಹೇಮಂತ್‍ಕುಮಾರ್ ಲೋಕಾರ್ಪಣೆಗೊಳಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀ ಶಂಕರವಿಲಾಸ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೊ.ವಿ.ಶ್ರೀನಿವಾಸಮೂರ್ತಿ, ಪಂಚಾಂಗಕರ್ತ ಡಾ.ಜಿ.ಬಿ ಅಮರೇಶ ಶಾಸ್ತ್ರೀ, ಡಾ.ಸುನೀಲ್‍ಕುಮಾರ್, ನವೀನ್, ದರ್ಶನ್ ಉಪಸ್ಥಿತರಿದ್ದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: