
ಪ್ರಮುಖ ಸುದ್ದಿ
ಪಾಕ್ ಪರ ಘೋಷಣೆ ಕೂಗಿದ್ದ ಯುವತಿಯ ಬಂಧನ
ರಾಜ್ಯ(ಬೆಂಗಳೂರು)ಫೆ.22:- ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ಧ ಪ್ರತಿಭಟನೆ ವೇಳೆಯೇ ಮತ್ತೆ ಪಾಕ್ ಪರ ಘೋಷಣೆ ಕೂಗಲಾಗಿದೆ. ಹೀಗೆ ಘೋಷಣೆ ಕೂಗಿರುವುದು ಮಲ್ಲೇಶ್ವರಂ ನಿವಾಸಿ ಆರ್ದಾ ಎಂಬ ಯುವತಿ ಎಂದು ಗುರುತು ಪತ್ತೆ ಮಾಡಿ ಪೊಲೀಸರು ಬಂಧಿಸಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ದ ಇಂದು ಬೆಂಗಳೂರಿನ ಟೌನ್ ಹಾಲ್ ಬಳಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು ಈ ವೇಳೆ ಆರ್ದಾ ಎಂಬ ಯುವತಿ ಪಾಕ್ ಪರ ಘೋಷಣೆ ಕೂಗಿದ್ದಾಳೆ.
ಆರ್ದಾ ಮಲ್ಲೇಶ್ವರಂ ನಿವಾಸಿಯಾಗಿದ್ದು, ಅಲ್ಲಿನ ಕಾಲೇಜೊಂದರಲ್ಲಿ ಇಂಜನಿಯರಿಂಗ್ ವ್ಯಾಸಂಗ ಮಾಡಿದ್ದಾಳೆ. ಆಕೆ ವ್ಯಾಸಂಗ ಬಳಿಕ ಗ್ರಾಫಿಕ್ ಡಿಜೈನರ್ ಆಗಿದ್ದಳು ಎನ್ನಲಾಗಿದೆ. ಬಂಧಿತ ಯುವತಿ ಆರ್ದಾ ಳನ್ನ ಎಸ್ಜೆ ಪಾರ್ಕ್ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)