ಮೈಸೂರು

104 ಉಪಗ್ರಹಗಳನ್ನು ಅವುಗಳ ಕಕ್ಷೆಗೆ ಸೇರಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ : ವಿಜ್ಞಾನಿ ಸಿ.ಡಿ.ಪ್ರಸಾದ್

ಫೆಬ್ರವರಿ 15, 2017 ವಿಶ್ವವೇ ಭಾರತದತ್ತ ಮುಖಮಾಡಿತ್ತು, ಕಾರಣ ಕೇವಲ 104 ಉಪಗ್ರಹಗಳನ್ನು ಒಂದೇರಾಕೆಟ್ ಮೂಲಕ ಉಡಾವಣೆ ಮಾಡುತ್ತದೆ ಎಂದಲ್ಲ, ಅದು ಪ್ರತೀ ಉಪಗ್ರಹ ಬಿಟ್ಟಾಗ ದಿಕ್ಕು ಬದಲಾವಣೆ ಆಗುತ್ತದೆ. ಅದನ್ನು ಸರಿ ಮಾಡಿಕೊಂಡು ಮುಂದೆ ಸಾಗಿ ಮತ್ತೆ ಉಪಗ್ರಹಗಳನ್ನು ವಿವಿಧ ಕಕ್ಷೆ ಸೇರಿಸಬೇಕಾಗಿತ್ತು. ಇದಕ್ಕೆ ಬಳಸಿದ ಎಸ್.ಎಲ್.ಆರ್.ಯು ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ತಿಳಿಯಬೇಕಿತ್ತು. ಆದರೆ ನಮ್ಮರಾಕೆಟ್ ಪಿ.ಎಸ್.ಎಲ್.ವಿ ಸಿ-37 ಯಶಸ್ವಿಯಾಗಿ 104 ಉಪಗ್ರಹಗಳನ್ನು ಅವುಗಳ ಕಕ್ಷೆಗೆ ಸೇರಿಸಿತು. ಇದು ವಿಶ್ವದ ಯಾವುದೇ ದೇಶ ಮಾಡದ ಸಾಧನೆ ಎಂದು ಇಸ್ರೋ ನಿವೃತ್ತ ವಿಜ್ಞಾನಿ ಸಿ.ಡಿ.ಪ್ರಸಾದ್, ಮೈಸೂರ್ ಸೈನ್ಸ್ ಫೌಂಡೇಷನ್ ಹಮ್ಮಿಕೊಂಡಿದ್ದ 48ನೇ ತಿಂಗಳ ವಿಜ್ಞಾನ ಉಪನ್ಯಾಸದಲ್ಲಿ ಪಾಲ್ಗೊಂಡು“ಇಸ್ರೋದ ಮಹಾನ್ ಸಾಧನೆ ಪಿ.ಎಸ್.ಎಲ್.ವಿ ಸಿ-37 ಮತ್ತು ಕ್ರಯೋಜನಿಕ್‍ ಇಂಜಿನ್ ಪರೀಕ್ಷೆ” ವಿಷಯ ಕುರಿತು ಮಾತನಾಡಿದರು.

ಕರ್ನಾಟಕದವರೇ ಆದ ಇಸ್ರೋದ ಅಧ್ಯಕ್ಷ ಎ.ಎಸ್.ಕಿರಣ್‍ಕುಮಾರ್‍ ನೇತೃತ್ವದಲ್ಲಿ ಭಾರತ ಇಂತಹ ಮಹತ್ತರ ಸಾಧನೆ ಮಾಡಿದೆ.ಆದರೆ ಆ ದಿನ ಯಾವುದೇ ಕರ್ನಾಟಕದ ಟಿ.ವಿ. ಮಾಧ್ಯಮಗಳು ಇದರ ನೇರ ಪ್ರಸಾರ ಮಾಡದೇ ತಮಿಳುನಾಡಿನ ಕ್ರಿಮಿನಲ್‍ ಒಬ್ಬರ ವಿಚಾರವನ್ನುಇಡೀ ದಿನ ತೋರಿಸಿದ್ದು ವಿಷಾದನೀಯ ಎಂದರು. ಭಾರತ ಬಾಹ್ಯಾಕಾಶ ತಂತ್ರಜ್ಞಾನ ಪ್ರಾರಂಭ ಮಾಡಿದ ದಿನಗಳಲ್ಲಿ ಅಮೇರಿಕ ನಮ್ಮ ದೇಶಕ್ಕೆ ತಂತ್ರಜ್ಞಾನ ನೀಡುವುದಕ್ಕೆ ನಿರಾಕರಿಸಿತ್ತು. ಆದರೆ ಇಂದು ಅದೇ ದೇಶ ನಮ್ಮ ಪಿ.ಎಸ್.ಎಲ್.ವಿ ಸಿ-37 ರಲ್ಲಿ 96 ಉಪಗ್ರಹಗಳನ್ನು ಉಡಾವಣೆ ಮಾಡಲು ನೀಡಿದೆ. ಕಾರಣ ಉಪಗ್ರಹ ಉಡಾವಣೆಯಲ್ಲಿ ನಮ್ಮ ಯಶಸ್ವಿ ದರ ಹೆಚ್ಚು, ಕಡಿಮೆ ಎತ್ತರದ ಕಕ್ಷೆಗಳಿಗೆ ಉಪಗ್ರಹಗಳನ್ನು ಸೇರಿಸುವ ತಂತ್ರಜ್ಞಾನ ಅವರ ಬಳಿ ಇಲ್ಲ ಮತ್ತು ಕಡಿಮೆ ವೆಚ್ಚದಲ್ಲಿ ಭಾರತ ಉಡಾವಣೆ ಮಾಡುತ್ತದೆ ಎಂದರು. ಈ ರಾಕೆಟ್ ನಲ್ಲಿ ನಮ್ಮದೇಶದ 3, ಅಮೇರಿಕದ 96 ಮತ್ತು ಕಜಕಿಸ್ತಾನ್, ಇಸ್ರೇಲ್, ನೆದರ್ ಲ್ಯಾಂಡ್, ಸ್ವಿಜರ್ ಲ್ಯಾಂಡ್ ಮತ್ತು ಯುಎಇಯ ತಲಾ ಒಂದು ಉಪಗ್ರಹಗಳನ್ನು ಉಡಾವಣೆ ಮಾಡಿಅಂತರರಾಷ್ಟ್ರಿಯ ಭಾವೈಕ್ಯತೆಯನ್ನು ಭಾರತ ಮೆರೆದಿದೆ ಎಂದು ಅಭಿಪ್ರಾಯಪಟ್ಟರು.

ಪ್ರೊಕ್ರಾನ್‍ ಅಣುಬಾಂಬ್ ಪರೀಕ್ಷೆಯಿಂದಾಗಿಅಮೇರಿಕ ನಮಗೆ ಪಿ.ಎಸ್.ಎಲ್.ವಿ ರಾಕೆಟ್ ಗಳಿಗಾಗಿ ಬಳಸುವ ಕ್ರಯೋಜನಿಕ್‍ ಇಂಜಿನ್‍ನನ್ನು ಕೊಡಲು ನಿರಾಕರಿಸಿತು. ಆದರೆ ಅಬ್ದುಲ್ ಕಲಾಂ ಐ.ಐ.ಟಿ ಕಾನ್ಪುರದಲ್ಲಿ ಕ್ರಯೋಜನಿಕ್‍ ಇಂಜಿನ್‍ ಕುರಿತು ಸಂಶೋಧನೆ ಮಾಡಿಸಿ ಎರಡು ಹಂತದ ಪರೀಕ್ಷೆ ನಡೆಸಿ ಮೂರನೇ ಹಂತದ ಪರೀಕ್ಷೆಯನ್ನು ಫೆಬ್ರವರಿ 16, 2017 ರಂದು 630 ಸೆಕೆಂಡ್ ಗಳ ಕಾಲ ಕ್ರಯೋಜನಿಕ್‍ ಇಂಜಿನ್‍ ಉರಿಸುವ ಮೂಲಕ ಯಶಸ್ವಿಯಾಗಿದ್ದೇವೆ. ಇದೂ ಕೂಡ ಭಾರತದ ಮಹಾನ್ ಸಾಧನೆ ಎಂದರು. ಇದರಿಂದಾಗಿ ರಾಕೆಟ್ 4 ಟನ್ ಭಾರದ ಉಪಗ್ರಹಗಳನ್ನು ಅಥವಾ ಮೂವರು ಬಾಹ್ಯಾಕಾಶ ವಿಜ್ಞಾನಿಗಳನ್ನು ಹೊತ್ತೊಯ್ಯುವ ಶಕ್ತಿ ಬಂದಿದೆ ಎಂದರು.ಉಪನ್ಯಾಸದ ನಂತರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪ್ರಶ್ನೆಗಳಿಗೆ  ಅವರು ಉತ್ತರಿಸಿದರು.

ಈ ಸಂದರ್ಭ ಮೈಸೂರ್ ಸೈನ್ಸ್ ಫೌಂಡೇಷನ್‍ಅಧ್ಯಕ್ಷ ಸಿ.ಕೃಷ್ಣೇಗೌಡ,ಎಮ್.ಎಸ್.ಎಫ್ ಕಾರ್ಯದರ್ಶಿ ಜಿ.ಬಿ.ಸಂತೋಷ್‍ಕುಮಾರ್, ಸದಸ್ಯರಾದ ಡಿ.ಎಸ್.ವೈಜಯಂತಿ, ಸಿ.ಪುರಂದರ್, ಶ್ರೀಕಂಠಮೂರ್ತಿ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: