ಮೈಸೂರು

ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಳನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಫೆ.22 :- ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಸಿಎಎ ವಿರೋಧಿಸಿ ಹೈದರಾಬಾದ್ ಸಂಸದ ಓವೈಸಿ ಸೇರಿ ವಿವಿಧ ಮುಸ್ಲಿಂ ಸಂಘಟನೆಗಳು ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಳನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಮೈಸೂರಿನ ಗನ್ ಹೌಸ್  ವೃತ್ತದಲ್ಲಿಂದು ಕರ್ನಾಟಕ ಸೇನಾಪಡೆ ವತಿಯಿಂದ  ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಮಾತನಾಡಿ ಮೊದಲು ಈ ರೀತಿಯ ವೇದಿಕೆಗಳನ್ನು ಸೃಷ್ಟಿಸಿ, ದೇಶ ವಿರೋಧಿ ಘೋಷಣೆಗಳನ್ನು ಕೂಗುವ ದೇಶದ್ರೋಹಿಗಳನ್ನು ,ಈ ಕಾರ್ಯಕ್ರಮವನ್ನು ಆಯೋಜಿಸಿರುವ ಪ್ರತಿಯೊಬ್ಬರನ್ನೂ ವಿಚಾರಣೆಗೊಳಪಡಿಸಿ, ಕಠಿಣ ಶಿಕ್ಷೆ ನೀಡಬೇಕು,  ನಮ್ಮ ದೇಶದ ಅನ್ನ ತಿಂದು ದೇಶ ವಿರೋಧಿ ಘೋಷಣೆ ಕೂಗುವುದು ನಿಜಕ್ಕೂ ಖಂಡನೀಯ, ಅಂತಹ  ಸಂಘಟನೆ ಗಳನ್ನು ಸರ್ಕಾರ ಮಟ್ಟಹಾಕಬೇಕು, ಈ ರೀತಿಯ ಪ್ರತಿಭಟನೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು. ಇಂತಹವರನ್ನು ಕೂಡಲೇ ಗಡಿಪಾರು ಮಾಡಬೇಕು. ಇಂತಹ ದೇಶ ದ್ರೋಹಿಗಳಿಗೆ ಕ್ಷಮೆ ಇರಬಾರದು. ಯಾವ ವಕೀಲರೂ ಇವರ ಪರವಾಗಿ ವಕಾಲತ್ತು ವಹಿಸಬಾರದು.   ಇವರ ಪರವಾಗಿ ವಕಾಲತ್ತು ವಹಿಸುವವರಿಗೂ ಕ್ಷಮೆ ಇರಬಾರದು ಎಂದರು.

ಸಿಎಎ ಕಾಯ್ದೆಯಿಂದ ಭಾರತೀಯರಿಗೆ ಯಾವುದೇ ತೊಂದರೆ ಇಲ್ಲವೆಂದು ಪ್ರಧಾನಿಯವರು ಹೇಳಿದ್ದಾರೆ. ಇದು ಪೌರತ್ವ ಕೊಡುವ ಕಾಯ್ದೆ, ಕಿತ್ತುಕೊಳ್ಳುವ ಕಾಯ್ದೆಯಲ್ಲ.  19 ವರ್ಷದ ಅಮೂಲ್ಯ ಎಂಬ ಯುವತಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವಾಗ ನಮ್ಮ ರಕ್ತ ಕುದಿಯುತ್ತದೆ. ಇಂತಹ ಆಲೋಚನೆ ಅವಳಿಗೆ  ಬಂದಿದ್ದಾದರೂ ಹೇಗೆ, ಅವಳ ಹಿಂದೆ ಯಾರಿದ್ದಾರೆ ? ಅವಳು ಯಾರಿಂದ ತರಬೇತಿ ಪಡೆದಿದ್ದಾಳೆ ಈ ರೀತಿ ಮಾತನಾಡಲು? ಯಾವ ಸಂಘಟನೆ ಹಿನ್ನೆಲೆಯಿಂದ ಬಂದಿದ್ದಾಳೆ? ಇವುಗಳೆಲ್ಲದರ ಬಗ್ಗೆ  ಸಮಗ್ರ ಸಿ ಬಿ ಐ ತನಿಖೆ ಆಗಬೇಕು, ನಮ್ಮ ದೇಶದ ಶಾಂತಿ ಸುವ್ಯವಸ್ಥೆ ಕದಡುವ ಕಾಣದ ಕೈಗಳನ್ನು ಸೆರೆ ಹಿಡಿದು ಮತ್ತೆ ಈ ರೀತಿ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಂಡು ಮತ್ತೆ  ಅಮೂಲ್ಯ ಳಂತ ವಿಷಜಂತುಗಳು ದೇಶ ವಿರೋಧಿ ಘೋಷಣೆಗಳನ್ನು  ಕೂಗದಂತೆ ಈ ಕೂಡಲೇ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹವರನ್ನು ಕೇವಲ ಬಂಧನ, ವಿಚಾರಣೆ ಮತ್ತು 1ಲಕ್ಷದ ಬಾಂಡ್ ಒಪ್ಪಿಗೆ ಪತ್ರ ಅಷ್ಟನ್ನೇ ತೆಗೆದುಕೊಂಡರೆ ಸಾಲದು, ಇವರ ಮೇಲೆ ಸರ್ಕಾರ ಈ ಕೂಡಲೇ ಕಠಿಣ ಕ್ರಮ ಜರುಗಿಸಿ, ಯಾವುದೇ ಸಭೆ ಸಮಾರಂಭ ಗಳಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡದಂತೆ ಆದೇಶಿಸಿ ಸರ್ಕಾರ ಈ ಕೂಡಲೇ  ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ  ದೇಶದ ಜನತೆ ಉಗ್ರ ಹೋರಾಟವನ್ನು ನಡೆಸಲಿದೆ ಎಂದು  ತಿಳಿಸಿ ಮುಖ್ಯಮಂತ್ರಿ ಗಳಿಗೆ, ಜಿಲ್ಲಾಧಿಕಾರಿಗಳ ಮುಖಾಂತರ ಈ ಮನವಿಯನ್ನು ಸಲ್ಲಿಸಿದರು.

ಪ್ರತಿಭಟನೆ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದು, ಡಾ. ಶಾಂತರಾಜೇಅರಸ್ ಪಿ,ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಸುಚೀಂದ್ರ,  ಶಾಂತಮೂರ್ತಿ, ವಿಜಯೇಂದ್ರ, ಪ್ರಜೀಶ್ ಪಿ, ಅಕ್ಷಯ್, ಪ್ರಭುಶಂಕರ್ ಎಂ ಬಿ, ರಾಜೇಶ್ ಪಿ, ಮೊಗಣ್ಣಾಚಾರ್, ಬಂಗಾರಪ್ಪ, ಜ್ಯೋತಿ, ಪರಿಸರ ಚಂದ್ರು, ಗುರುಮಲ್ಲಪ್ಪ, ನಂಜುಂಡಸ್ವಾಮಿ, ನಂದಕುಮಾರ್, ದರ್ಶನ್ ಗೌಡ, ಹರೀಶ್ ಅಂಕಿತ್, ಶ್ರೀಕಂಠೇಗೌಡ, ಸ್ವಾಮಿ, ಶ್ರೀನಿವಾಸ ರಾಜಕುಮಾರ್, ಸಂತೋಷ್ ಸಿಂಗ್, ದೂರ ಸುರೇಶ್,  ಗುರುಶಂಕರ್, ಕಲೀಂ, ರವಿತೇಜ, ನಾಜೀರ್, ಹರ್ಷ, ದುರ್ಗೇಶ್ ಕುಮಾರ್, ರಾಧಾಕೃಷ್ಣ, ರಾಕೇಶ್ ಅರಸ್, ಭರತ್, ಕೃಷ್ಣ ಸಿ, ಭಾಸ್ಕರ, ಸಿದ್ದೇಶ್, ರಮಾಬಾಯಿ ಮಲ್ಲೇಶ್, ರಮೇಶ್, ಆನಂದ್ ಹಾಗು ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: