ಮೈಸೂರು

ಡ್ಯೂಟಿ ನೀಡುವ ವಿಚಾರದಲ್ಲಿ ಡಿಪೋ ಮ್ಯಾನೇಜರ್ ಹಾಗೂ ಚಾಲಕನ ನಡುವೆ ಮಾತಿನ ಚಕಮಕಿ : ಕೈ ಕೈ ಮಿಲಾಯಿಸಿರುವ ವಿಡಿಯೋ ವೈರಲ್

ಮೈಸೂರು, ಫೆ.22:-    ಡ್ಯೂಟಿ ನೀಡುವ ವಿಚಾರದಲ್ಲಿ ಡಿಪೋ ಮ್ಯಾನೇಜರ್ ಹಾಗೂ ಚಾಲಕನ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿರುವ ವಿಡಿಯೋ ವೈರಲ್ ಆಗಿದೆ.

ಜಿಲ್ಲೆಯ ಕೆ. ಆರ್. ನಗರ ಬಸ್ ಡಿಪೋನಲ್ಲಿ ಕಳೆದ ಡಿಸೆಂಬರ್ 9 ರಂದು ಈ ಘಟನೆ ನಡೆದಿದ್ದು, ಚಾಲಕ ಚರಣಬಸಯ್ಯ ಎಂಬವರು ಡಿಪೋ ಮ್ಯಾನೇಜರ್ ಪಾಪನಾಯಕರನ್ನು ಡ್ಯೂಟಿ ಕೇಳಲು ಬಂದ ಸಂದರ್ಭದಲ್ಲಿ ಮ್ಯಾನೇಜರ್ ಡ್ಯೂಟಿ ನೀಡಲು ಲಂಚ ಕೇಳಿದ ಮಾತನ್ನು ಚಾಲಕ ಮೊಬೈಲ್ ನಲ್ಲಿ ಸೆರೆಹಿಡಿದಿದ್ದನ್ನು  ನೋಡಿದ ಮ್ಯಾನೇಜರ್ ಆತನ‌ ಮೊಬೈಲ್ ಕಿತ್ತುಕೊಂಡಿದ್ದಾರೆ. ಬಸ್ ಡಿಪೋ ಮ್ಯಾನೆಜರ್ ಹಾಗೂ ಚಾಲಕ ನಡುವಿನ ಜಗಳ  ಸಂಬಂಧ 2 ತಿಂಗಳ ಹಿಂದೆಯೇ ಚಾಲಕನಿಂದ ಕೆ. ಆರ್. ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದು, ದೂರು ದಾಖಲಾಗಿದೆ. ಜೊತೆಗೆ ಇಲಾಖೆ ತನಿಖೆ ಕೂಡಾ ನಡೆಸುತ್ತಿದ್ದು, ಚಾಲಕ ಇದೇ ಡಿಪೋನಲ್ಲಿ ಕೆಲಸ ಮಾಡುತ್ತಿದ್ದಾರೆ.  ಆದರೂ ಈ ವಿಡಿಯೋ ವೈರಲ್ ಆಗಿದ್ದು ಏಕೆ ಎಂಬುದು ತಿಳಿಯುತ್ತಿಲ್ಲ ಎಂದು ಡಿಪೋ ಮ್ಯಾನೇಜರ್ ಪಾಪನಾಯಕ್ ಹೇಳುತ್ತಾರೆ. ಈ ಮಧ್ಯೆ ನಾಳೆ ಕೆ. ಆರ್. ನಗರ ಬಸ್ ಡಿಪೋ ಸಂಘದ ಚುನಾವಣೆ ನಡೆಯುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: