ಪ್ರಮುಖ ಸುದ್ದಿಮೈಸೂರು

ಜಾರಕಿಹೊಳಿ ರಾಜೀನಾಮೆ ವಿಚಾರ : ಕುಮಟಳ್ಳಿ ವಿಚಾರದಲ್ಲಿ ಎಮೋಷನಲ್ ಆಗಿ‌ ಮಾತನಾಡಿದ್ದಾರೆ, ಗಂಭೀರವಾಗಿ ಪರಿಗಣಿಸೋದು ಬೇಡ : ಸಚಿವ ಜಗದೀಶ್ ಶೆಟ್ಟರ್

ಮೈಸೂರು,ಫೆ.23:-  ಜಾರಕಿಹೊಳಿ ರಾಜೀನಾಮೆ ನೀಡುತ್ತೇನೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಪ್ರತಿಕ್ರಿಯಿಸಿದ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ ಅವರು ಕುಮಟಳ್ಳಿ ವಿಚಾರದಲ್ಲಿ ಎಮೋಷನಲ್ ಆಗಿ‌ ಮಾತನಾಡಿದ್ದಾರೆ. ಅದು ಕೇವಲ ಪಾಸಿಂಗ್ ರಿಮಾರ್ಕ್. ಅದನ್ನು ತೀರ ಗಂಭೀರವಾಗಿ ಪರಿಗಣಿಸೋದು ಬೇಡ. ನಮ್ಮ ಮನೆಯಲ್ಲಿ ಯಾವ ಶಾಸಕರು ಪ್ರತ್ಯೇಕ ಸಭೆ ನಡೆಸಿಲ್ಲ. ಇದೆಲ್ಲವು ಕೇವಲ ವದಂತಿ ಎಂದು ಸ್ಪಷ್ಟಪಡಿಸಿದರು.

ದೇಶ ದ್ರೋಹದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಇಲ್ಲಿಯೇ ಅನ್ನ ತಿಂದು ಇಲ್ಲಿಯೇ  ಈ ದೇಶ ದ್ರೋಹದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಇದು ಕ್ಷಮಿಸುವ ಅಪರಾಧವಲ್ಲ. ತನಿಖೆ ಪ್ರಗತಿಯಲ್ಲಿದೆ, ರಾಜ್ಯ ಸರ್ಕಾರ ಎಲ್ಲಾ‌ ಕ್ರಮ ಕೈಗೊಂಡಿದೆ ಎಂದರು.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದೆ. ಬಂಡವಾಳ ಹೂಡಿಕೆ ವಿಚಾರದಲ್ಲಿ ಇದುವರೆಗೂ ಬೆಂಗಳೂರು ಮಾತ್ರ ಮುಂಚೂಣಿಯಲ್ಲಿತ್ತು. ಆದರೀಗ ರಾಜ್ಯದ ಇತರ ನಗರಗಳಲ್ಲೂ ಬಂಡವಾಳ ಹೂಡಿಕೆ ಮಾಡಲು ಪೂರಕ ವಾತಾವರಣವಿದೆ. ಟೈಪ್ ಟೂ ನಗರವಾಗಿರುವ ಮೈಸೂರು ಸೇರಿದಂತೆ ರಾಜ್ಯದ ಇತರ ನಗರಗಳಲ್ಲೂ ಬಂಡವಾಳ ಹೂಡಿಕೆ ಮಾಡಲು ಉದ್ದಿಮೆದಾರರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಮುಂಬೈನಲ್ಲಿ ನಡೆಸಿದ ರೋಡ್ ಶೋ ಕೂಡ ಸಾಕಷ್ಟು ಪರಿಣಾಮ ಬೀರಿದೆ. ಅದರಿಂದ ಮಹಾರಾಷ್ಟ್ರದ ಉದ್ದಿಮೆದಾರರು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದಾಗಿದ್ದಾರೆ. ಕೈಗಾರಿಕೆಗಳ ಸ್ಥಾಪನೆಗೆ ಒಲವು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ದಾವೋಸ್ ನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲೂ ಉದ್ದಿಮೆದಾರರು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಕೋರಲಾಗಿದೆ. ಬರುವ ನವಂಬರ್ 3 ಮತ್ತು 4 ರಂದು ಮತ್ತೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: