ಮೈಸೂರು

ಮಾರ್ಚ್ 15ರಂದು ಕೃಷ್ಣ ಬಿಜೆಪಿಗೆ : ಮೈಸೂರಿನಲ್ಲಿ ಬಿಎಸ್ ವೈ ಹೇಳಿಕೆ

ಮಾರ್ಚ್ 15ರಂದು ಎಸ್.ಎಂ‌‌.ಕೃಷ್ಣ ಬಿಜೆಪಿಗೆ ಸೇರ್ಪಡೆಗೊಳ್ಳಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೃಷ್ಣ ಬಿಜೆಪಿ ಸೇರುವ ಸಂಧರ್ಭದಲ್ಲಿ ನಾನು ಕೂಡ ದೆಹಲಿಯಲ್ಲಿ ಇರುತ್ತೇನೆ. ಈ ಕಾರಣಕ್ಕಾಗಿಯೇ ಇಂದು ನಂಜನಗೂಡಿನಿಂದ ಬೆಂಗಳೂರಿಗೆ ತೆರಳುತ್ತಿದ್ದೇನೆ. ನಾಳೆ ದೆಹಲಿಗೆ ತೆರಳಿ ಕೃಷ್ಣರನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ ಎಂದರು.

ಕಳಲೆ ಕೇಶವಮೂರ್ತಿ ಹಾಗೂ ಶ್ರೀನಿವಾಸ್ ಪ್ರಸಾದ್ ನಡುವೆ  ಪೈಪೋಟಿ ಇದೆ ಎನ್ನುವ ಮೂಲಕ ಸಿದ್ದರಾಮಯ್ಯ ಸೋಲೊಪ್ಪಿಕೊಂಡಿದ್ದಾರೆ. ನಂಜನಗೂಡಿನಲ್ಲಿ ಜನರು ನೀರಿಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದಾರೆ. ನಾನು ಬಂದಿದ್ದು ಪ್ರಚಾರಕ್ಕೋ ಅಥವಾ ವಿಜಯೋತ್ಸವಕ್ಕೋ  ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದರು.

ಯಡಿಯೂರಪ್ಪ ಮತ್ತು ಪ್ರಧಾನಿಯನ್ನು ಟೀಕೆ ಮಾಡುತ್ತಿದ್ದರೆ ನಾವು ಬಂದು ಪ್ರಚಾರ ಮಾಡುವ ಅಗತ್ಯವಿಲ್ಲ. ಅವರೇ ನಮ್ಮ ಕುರಿತು ಪ್ರಚಾರ ಮಾಡಿದಂತೆ ಎನ್ನುತ್ತಾ ಹಾಸ್ಯಭರಿತವಾಗಿ ನಕ್ಕರು. ಹತಾಶೆಯಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ಮುಖಂಡರು ಟೀಕೆ ಮಾಡುತ್ತಿದ್ದಾರೆ. ಭೌತಿಕ ಸ್ಥಿಮಿತ ಕಳೆದುಕೊಂಡಿರೋದು ನಾನೋ ಅಥವಾ ಸಿದ್ದರಾಮಯ್ಯನವರೋ ಎನ್ನುವುದು ಇದರಿಂದಲೇ ಗೊತ್ತಾಗಲಿದೆ ಎಂದರು. ಸಿ.ಎಂ.ಇಬ್ರಾಹಿಂ ಹೇಳಿಕೆ ಕುರಿತು ಪ್ರಶ್ನಿಸಿದಾಗ ಅಂಥವರ ಹೇಳಿಕೆಗಳಿಗೆ ನಾನು ಉತ್ತರ ನೀಡಲ್ಲ ಎಂದರು.

ಬಿಜೆಪಿಯ ಹಲವು ನಾಯಕರು ಯಡಿಯೂರಪ್ಪ ಜೊತೆಗಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: