ಮೈಸೂರು

ಬೈಲಕುಪ್ಪೆಯಲ್ಲಿ ಲೋಸರ್ ಹಬ್ಬದ ಕಡೆಯ ದಿನ ಆಚರಣೆ ಸಂಭ್ರಮ

ಬೈಲಕುಪ್ಪೆ : ತಾಲೂಕಿನ ಬೈಲಕುಪ್ಪೆ ಟಿಬೆಟನ್ ನಿರಾಶ್ರಿತರ ಶಿಬಿರದಲ್ಲಿರುವ ಹಾಗೂ ಪ್ರಮುಖ ಪ್ರವಾಸಿ ತಾಣವಾದ ಗೋಲ್ಡನ್ ಟೆಂಪಲ್ ಬೌದ್ಧ ದೇವಾಲಯದಲ್ಲಿ ಲೋಸರ್ ಹಬ್ಬದ ಕಡೆಯ ದಿನದ ಉತ್ಸವವನ್ನು ಆಚರಿಸಲಾಯಿತು.

ಸೋಮವಾರ ಟಿಬೆಟನ್ ಸಮುದಾಯದ ಎಲ್ಲರೂ ಒಟ್ಟುಗೂಡಿ ಲೋಸರ್ ಹಬ್ಬ ಹಾಗೂ ಟಿಬೆಟನ್ ಹೊಸ ವರ್ಷ ಆಚರಣೆ ಅಂಗವಾಗಿ ನೃತ್ಯ ಪ್ರದರ್ಶನ ನೀಡಿದರು.

ಬೆಳಿಗ್ಗೆ 7 ಘಂಟೆ ಸಮಯಕ್ಕೆ ಟಿಬೆಟನ್ನರ ಸಂಸ್ಕೃತಿ ಬಿಂಬಿಸುವ ತ್ಸೇಲಾ ನಮ್‍ಸಮ್ ಪರದೆಯನ್ನು ಅನಾವರಣ ಗೊಳಿಸಲಾಯಿತು. ಇದು ಭಾರತದಲ್ಲೇ ಏಕೈಕ ಪರದೆಯಾಗಿರುವುದು ವಿಶೇಷವಾಗಿದ್ದು, ಸಾವಿರಾರು ಟಿಬಿಟಿಯನ್ನರು ಶ್ರದ್ಧೆ ಭಕ್ತಿಯಿಂದ ಕಣ್ಣುತುಂಬಿಕೊಂಡರು. ಪರದೆಯನ್ನು ವರ್ಷಕ್ಕೆ ಒಂದು ಭಾರಿ ಮಾತ್ರ ಅನಾವರಣ ಮಾಡಲಾಗುವುದು.

ಈ ಸಂದರ್ಭ ಹಲವಾರು ಬೌದ್ಧ ಲಾಮಾಗಳು ವಿವಿಧ ಬಗೆಯ ಗೊಂಬೆಗಳ ಮುಖವಾಡಗಳನ್ನು ಧರಿಸಿ ಸಭಾಂಗಣದಲ್ಲಿ ನೆರೆದಿದ್ದ ಸಾವಿರಾರು ಟಿಬೆಟನ್ ನಿರಾಶ್ರಿತರ ಎದುರು ನೃತ್ಯ ಪ್ರದರ್ಶಿಸುವುದರ ಮೂಲಕ ಎಲ್ಲರ ಗಮನ ಸೆಳೆದರು.

ಕೆಲವು ಟಿಬೆಟನ್ ಗೀತೆಗಳಿಗೆ ಡೋಲು ಕುಣಿತ ಸಹ ನಡೆಸಿಕೊಟ್ಟರು. ನೃತ್ಯ ವಿಕ್ಷಿಸಿದ ಹಲವು ವಿದೇಶಿಯರು ಜೊತೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಭಾಂಗಣದ ಹೊರಗೆ ನೆರೆದಿದ್ದ ಟಿಬೆಟ್ಟನ್ನರು ಪಟಾಕಿಗಳನ್ನು ಸಿಡಿಸಿದರು. ಟಿಬೆಟನ್ ಸಂಸ್ಥೆಗೆ ಸೇರಿದ ಮುಖ್ಯ ಅತಿಥಿಗಳು ಭಾಗವಹಿಸಿದ್ದರು.

(ಆರ್‍.ಬಿ.ಆರ್/ಎನ್‍.ಬಿ.ಎನ್‍)

Leave a Reply

comments

Related Articles

error: