ಕರ್ನಾಟಕಪ್ರಮುಖ ಸುದ್ದಿ

ಯೋಗೇಶ್ ಮಾಸ್ಟರ್ ಮೇಲೆ ಮಸಿ : ಹಿಂದೂ ಜಾಗರಣ ವೇದಿಕೆ ಸದಸ್ಯರ ಬಂಧನ

ದಾವಣಗೆರೆ : ಸಾಹಿತಿ ಯೋಗೇಶ್ ಮಾಸ್ಟರ್‍ಗೆ ಕಿಡಿಗೇಡಿಗಳು ಮಸಿ ಸುರಿದು ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆಯ ಇಬ್ಬರು ಸದಸ್ಯರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಿಂದೂ ಜಾಗರಣ ವೇದಿಕೆಯ ಶಿವಪ್ರಸಾದ್ ಹಾಗೂ ಚೇತನ್ ಎಂಬುವವರನ್ನ ದಾವಣಗೆರೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಶಿವಪ್ರಸಾದ್ ಖಾಸಗಿ ಪತ್ರಿಕೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಯೋಗೇಶ್ ಅವರು ಹಿಂದು ದೇವತೆಗಳನ್ನು ಟೀಕಿಸಿ ಪುಸ್ತಕ ಬರೆದಿದ್ದಾರೆ ಎನ್ನುವ ಕಾರಣಕ್ಕೆ ಈ ದಾಳಿ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ದಾವಣಗೆರೆಯ ನಗರದ ಕುವೆಂಪು ಕನ್ನಡ ಭವನದ ಬಳಿ ನಿನ್ನೆ ಪಿ. ಲಂಕೇಶ್ ಅವರ ನೆನಪು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ನಿಮಿತ್ತ ದಾವಣಗೆರೆಗೆ ಆಗಮಿಸಿದ್ದ ಯೋಗೀಶ್ ಮಾಸ್ಟರ್ ಅವರ ಮೇಲೆ ಕಾರ್ಯಕ್ರಮದ ಸಮೀಪವೇ ಇದ್ದ ಹೋಟೆಲ್ ಬಳಿ ಕಿಡಿಗೇಡಿಗಳು ಕಪ್ಪು ಬಣ್ಣ ಸುರಿದು ಹಲ್ಲೆ ಮಾಡಿದ್ದರು.

(ಎಸ್‍.ಎನ್‍/ಎನ್‍.ಬಿ.ಎನ್‍)

Leave a Reply

comments

Related Articles

error: