ಪ್ರಮುಖ ಸುದ್ದಿ

ಸ್ವಾಮಿ ವಿವೇಕಾನಂದರ ಸ್ಮರಣೆಯ ಜೊತೆಗೆ, ಬಾಲಿವುಡ್ , ಕ್ರಿಕೆಟಿಗರನ್ನು ನೆನೆದ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ !

ದೇಶ(ಅಹ್ಮದಾಬಾದ್)ಫೆ.24:-  ಅಹ್ಮದಾಬಾದ್ ನ  ಮೋಟೆರಾ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ಬಾಲಿವುಡ್‌ನಿಂದ ಕ್ರಿಕೆಟ್‌ ವರೆಗೂ  ಪ್ರಸ್ತಾಪಿಸಿದ್ದಾರೆ. ಅವರು ಪ್ರಧಾನಿ ಮೋದಿಯವರನ್ನು ತೀವ್ರವಾಗಿ ಹೊಗಳಿದರು.

ನಾವು ಯಾವಾಗಲೂ ಈ ಆತಿಥ್ಯವನ್ನು ನೆನಪಿಸಿಕೊಳ್ಳುತ್ತೇವೆ. ಭಾರತವು ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಪಿಎಂ ಮೋದಿ ಚಹಾ ಮಾರಾಟಗಾರರಾಗಿ ತಮ್ಮ ಜೀವನವನ್ನು ಪ್ರಾರಂಭಿಸಿದರು. ಅವರು ಚಹಾ ಮಾರಾಟ ಮಾಡುತ್ತಿದ್ದರು. ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಅವರು ತುಂಬಾ ಪ್ರಬಲ ವ್ಯಕ್ತಿ ಎಂದಿದ್ದಾರೆ.

ಅಮೆರಿಕ ಭಾರತವನ್ನು ಪ್ರೀತಿಸುತ್ತದೆ, ಭಾರತವನ್ನು ಗೌರವಿಸುತ್ತದೆ ಮತ್ತು ಅಮೆರಿಕ ಯಾವಾಗಲೂ ಭಾರತದ ಪ್ರಾಮಾಣಿಕ ಮತ್ತು ನಿಷ್ಠಾವಂತ ಸ್ನೇಹಿತನಾಗಿರುತ್ತದೆ. ಪ್ರಥಮ ಮಹಿಳೆ ಮತ್ತು ನಾನು ಈ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಂದೇಶ ನೀಡಲು ವಿಶ್ವದ 8000 ಮೈಲುಗಳಷ್ಟು ಪ್ರಯಾಣಿಸಿ  ಇಲ್ಲಿಗೆ ಬಂದಿದ್ದೇವೆ. ಲಕ್ಷಾಂತರ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಜೈನರು, ಕ್ರಿಶ್ಚಿಯನ್ನರು ಮತ್ತು ಯಹೂದಿಗಳು ಒಟ್ಟಾಗಿ ಪ್ರಾರ್ಥಿಸುತ್ತಾರೆ ಎಂಬ ಕಾರಣಕ್ಕಾಗಿ ಭಾರತವನ್ನು ವಿಶ್ವದಾದ್ಯಂತ ಪ್ರಶಂಸಿಸಲಾಗಿದೆ. ಭಾರತದ ಏಕತೆ ಇಡೀ ಜಗತ್ತಿಗೆ ಒಂದು ಉದಾಹರಣೆಯಾಗಿದೆ.

ಪ್ರಪಂಚದಾದ್ಯಂತ ಜನರು ಬಾಲಿವುಡ್ ಚಲನಚಿತ್ರಗಳನ್ನು ವೀಕ್ಷಿಸುತ್ತಾರೆ, ಆನಂದಿಸುತ್ತಾರೆ, ಭಂಗಡಾ, ಕ್ಲಾಸಿಕ್ ಚಲನಚಿತ್ರಗಳಾದ ಡಿಡಿಎಲ್ಜೆ, ಶೋಲೆಯಂತಹ ಚಿತ್ರಗಳನ್ನು ಬಾಲಿವುಡ್ ನೀಡಿದೆ.  ನೀವು ಇಲ್ಲಿ ಉತ್ತಮ ಕ್ರಿಕೆಟಿಗರನ್ನು ಹೊಂದಿದ್ದೀರಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರಿದ್ದಾರೆ.

ಐದು ತಿಂಗಳ ಹಿಂದೆ ಅಮೆರಿಕವು ನಿಮ್ಮ ಮಹಾನ್ ಪ್ರಧಾನಿಯನ್ನು ಟೆಕ್ಸಾಸ್‌ನ ಬೃಹತ್ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸ್ವಾಗತಿಸಿತು. ಇಂದು ಭಾರತವು ಅಹಮದಾಬಾದ್‌ನ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಮ್ಮನ್ನು ಸ್ವಾಗತಿಸಿದೆ.

ಮಹಾನ್ ಧಾರ್ಮಿಕ ಗುರು ಸ್ವಾಮಿ ವಿವೇಕಾನಂದರು ಒಮ್ಮೆ  ಹೇಳಿದ್ದರು. ನಾನು ಪ್ರತಿಯೊಬ್ಬ ಮನುಷ್ಯನ ಮುಂದೆ ನಿಂತಾಗ ದೇವರನ್ನು ಅವನಲ್ಲಿ ನೋಡುವ ಕ್ಷಣ, ನಾನು ಆ ಕ್ಷಣದಲ್ಲಿ ಮುಕ್ತನಾಗುತ್ತೇನೆ ಎಂದು ಹೇಳಿದ್ದರು. ಭಾರತ ಮತ್ತು ಅಮೆರಿಕಾದಲ್ಲಿ ನಾವು  ದೊಡ್ಡ ಉದ್ದೇಶದಿಂದ ಜನಿಸಿದ್ದೇವೆ ಎಂಬುದನ್ನು ತಿಳಿದಿದ್ದೇವೆ.

ಭಾರತ ಮತ್ತು ಅಮೆರಿಕ ಒಟ್ಟಾಗಿ ಭಯೋತ್ಪಾದನೆಯನ್ನು ಕೊನೆಗೊಳಿಸಲು ಬದ್ಧವಾಗಿವೆ. ಪಾಕಿಸ್ತಾನದ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳು ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನನ್ನ ಸರ್ಕಾರ   ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ನಮ್ಮ ಪ್ರಯತ್ನಗಳ ಬಲದ ಮೇಲೆ, ನಾವು ದೊಡ್ಡ ಪ್ರಗತಿಯ ಸಂಕೇತಗಳನ್ನು ನೋಡಲು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ, ಭಯೋತ್ಪಾದನೆಯ ಅಂತ್ಯ, ದಕ್ಷಿಣ ಏಷ್ಯಾದ ಎಲ್ಲಾ ದೇಶಗಳಲ್ಲಿ ಸಾಮರಸ್ಯವನ್ನು ಸ್ಥಾಪಿಸುವ ಬಗ್ಗೆ ನಾನು ಭರವಸೆ ಹೊಂದಿದ್ದೇನೆ.   ‘ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಯಸುತ್ತೇವೆ, ಆಧುನಿಕ ವಿಮಾನಗಳನ್ನು ನೀಡಲಿ ಬಯಸುತ್ತೇವೆ ‘ ಎಂದು ಹೇಳಿದರು. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: