ಪ್ರಮುಖ ಸುದ್ದಿಮನರಂಜನೆ

ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾದ ‘ಕೊಡವರ ಸಿಪಾಯಿ’

ರಾಜ್ಯ( ಮಡಿಕೇರಿ)ಫೆ.25: -ತೀತಿಮಾಡ ಅರ್ಜುನ್ ದೇವಯ್ಯ, ತೇಜಸ್ವಿನಿ ಶರ್ಮ ಮುಖ್ಯ ಪಾತ್ರದಲ್ಲಿರುವ ಕೊಡವರ ಸಿಪಾಯಿ ಕೊಡವ ಭಾಷಾ ಚಲನಚಿತ್ರ ಬೆಂಗಳೂರಿನಲ್ಲಿ ಆಯೋಜಿತ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಬೆಂಗಳೂರಿನಲ್ಲಿ ಇದೇ 26 ರಿಂದ ಮಾರ್ಚ್ 4 ರವರೆಗೆ ಆಯೋಜಿತ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲು ಆಯ್ಕೆಯಾಗಿದೆ. ಚಿತ್ರೋತ್ಸವಕ್ಕೆ 220 ಕ್ಕೂ ಅಧಿಕ ಚಿತ್ರಗಳು ಪ್ರದರ್ಶನಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಈ ಪೈಕಿ 1.05ಗಂಟೆ ಅವಧಿಯ ಕೊಡವರ ಸಿಪಾಯಿ ಸೇರಿದಂತೆ 25 ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಕಳೆದ ಡಿಸಂಬರ್ ನಲ್ಲಿಕೊಡವರ ಸಿಪಾಯಿ ಕೊಲ್ಕೋತ್ತದಲ್ಲಿ ನಡೆದ ಅಂತರರಾಷ್ಟ್ರೀಯ ಸಿನಿ ಉತ್ಸವದಲ್ಲಿಯೂ ಪ್ರದರ್ಶನ ಕಂಡಿತ್ತು.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತೆರೆ ಕಂಡಿದ್ದ ಕೊಡವರ ಸಿಪಾಯಿ ಕೊಡಗಿನ ಬಹುತೇಕ ಊರುಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಮೈಸೂರು ಕೊಡವ ಸಮಾಜದಲ್ಲಿಯೂ ಪ್ರದರ್ಶನ ಕಂಡಕೊಡವರ ಸಿಪಾಯಿ ಫೆ.28 ರಂದು ಬೆಂಗಳೂರು ಕೊಡವ ಸಮಾಜದಲ್ಲಿಯೂ ಪ್ರದರ್ಶನ ಕಾಣುತ್ತಿದೆ. ಈವರೆಗೆ 100 ಕ್ಕೂ ಅಧಿಕ ಪ್ರದರ್ಶನ ಕಂಡ ಹೆಗ್ಗಳಿಕೆಯ ಕೊಡವರ ಸಿಪಾಯಿ ಕೊಡಗಿನ ಸೈನಿಕನೋರ್ವ ಕರ್ವವ್ಯದಿಂದ ನಿವೃತ್ತನಾದ ಬಳಿಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮತ್ತು ನಿವೃತ್ತಯೋಧನ ಬದುಕು ಬವಣೆಯ ಕಥೆ ಹೊಂದಿದೆ. ಉಳುವಗಂಡ ಕಾವೇರಿ ಚಿತ್ರಕಥೆ ಬರೆದಿರುವ ಕೊಡವರ ಸಿಪಾಯಿಗೆ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನವಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: