ಮೈಸೂರು

ವಿಷ ಸೇವಿಸಿ ಆಟೋಡ್ರೈವರ್ ಆತ್ಮಹತ್ಯೆ

ಆಟೋ ಡ್ರೈವರ್  ಓರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತನ್ನು ಕುವೆಂಪುನಗರ  ಇ&ಎಫ್ ಬ್ಲಾಕ್ ನಿವಾಸಿ ರಂಗಸ್ವಾಮಿ (42)ಎಂದು ಗುರುತಿಸಲಾಗಿದೆ. ಈತ ಕಳೆದ ತಿಂಗಳು ಮಂಡಿ ಮೊಹಲ್ಲಾದ ರಾಮಣ್ಣ ಎಂಬ ಬ್ರೋಕರ್ ಮೂಲಕ ಲೋನ್ ನಲ್ಲಿ ಆಟೋ ಖರೀದಿಸಿದ್ದ ಎನ್ನಲಾಗಿದೆ. ಆದರೆ ಸಾಲದ ಹಣಕ್ಕೆ  ಪದೇ ಪದೇ ಒತ್ತಾಯ ಬರುತ್ತಿತ್ತು ಎಂದು ತಾಯಿ ವೆಂಕಟಲಕ್ಷ್ಮಿ ಆರೋಪಿಸಿದ್ದಾರೆ. ಇದರಿಂದ ಮನನೊಂದ ಈತ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಕುವೆಂಪುನಗರ ಠಾಣಾ ಪೊಲೀಸ್ ರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: