ಮೈಸೂರು

ಮೌಢ್ಯತೆ ನಾಶ ಮಾಡಲಿಲ್ಲ ಅಂದರೆ ಸ್ವತಂತ್ರ ಪೂರ್ವಕ್ಕೆ ಹೋಗಿ ಬಿಡುತ್ತೇವೆ : ಬಿ‌‌.ಟಿ‌.ಲಲಿತಾ ನಾಯಕ್

ಮೈಸೂರು,ಫೆ.26:- ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಂಜಾರ (ಲಂಬಾಣಿ) ಸೇವಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಿನ್ನೆ 281ನೇ ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಿಸಲಾಯಿತು.

ಕರ್ನಾಟಕ ಕಲಾ ಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿ,ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರಾದ ಬಿ‌‌.ಟಿ‌.ಲಲಿತಾ ನಾಯಕ್ ಹಾಗೂ ವೇದಿಕೆಯ ಗಣ್ಯರು ದೀಪ ಬೆಳಗಿ,ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವುದರ ಮೂಲಕ ಚಾಲನೆ ನೀಡಿದರು.

ನಂತರ ಬಿ‌‌.ಟಿ‌.ಲಲಿತಾ ನಾಯಕ್ ಮಾತನಾಡಿ    ಜಿಲ್ಲಾಡಳಿತ ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಿಸುತ್ತಿದೆ. ಕಾರ್ಯಕ್ರಮಕ್ಕೆ ಆಹ್ವಾನಿಸಿರುವ ಯಾವ ಒಬ್ಬ ಗಣ್ಯರೂ ಆಗಮಿಸಿಲ್ಲ. ಒಂದು ಸರ್ಕಾರಿ ಕಾರ್ಯಕ್ರಮಕ್ಕೆ ಯಾವ ಒಬ್ಬ ಗಣ್ಯರೂ ಆಗಮಿಸದಿರೋಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದರು

ಲಂಡನ್ ಕುಮಾರ್ ನಾಯಕ್ ಅವರು ಲಂಡನ್ ನಿಂದ ಆಗಮಿಸಿದ್ದಾರೆ ಸಂತೋಷ ಆಯ್ತು. ನಾಡಗೀತೆಯನ್ನು ರಾಷ್ಟ್ರ ಗೀತೆ ಮಟ್ಟದಲ್ಲಿ ಕೊಂಡು ಹೋಗಬೇಕು. ಒಂದೇ ಬಾರಿ ಹಾಡಬೇಕು. ಮತ್ತೆ ಮತ್ತೆ ಸಾಲುಗಳನ್ನ ಹಾಡಬಾರದು ಎಂದು ಸಲಹೆ ನೀಡಿದರು.

ಇತ್ತೀಚೆಗೆ ಜಾತೀಯವಾಗಿ ವಿಷ ಬೀಜ ಬಿತ್ತುತ್ತಿದ್ದಾರೆ. ಸಂವಿಧಾನವನ್ನು ನಾವು ಗೌರಿಸಬೇಕು. ಜನಾಂಗದವರನ್ನು ದೇವರು ಅಂತ ಪೂಜೆ ಮಾಡುತ್ತೇವೆ. ದೇವರು ಮಾಡೋದಕ್ಕೆ ಹೋಗದೇ ಅವರನ್ನು ಸಂತರಾಗಿಯೇ ಇರುವಂತೆ ಮಾಡಿದ್ದಾರೆ. ಜನರು ಮೌಢ್ಯರಾಗಿದ್ದಾರೆ. ಯಾರು ಜೀವ ಕೊಡುತ್ತಾರೋ ಅವರೇ ದೇವರು. ತಂದೆ ತಾಯಿಯನ್ನು ಶಿವ ಶಿವೆ ಅಂತ ಪೂಜಿಸುತ್ತೇವೆ. ಮೌಢ್ಯಗಳನ್ನ ಹೋಗಲಾಡಿಸಬೇಕು. ಇದು ರಾಜರ ಕಾಲ ಅಲ್ಲ. ಎಲ್ಲಾ ರಾಜರು ತಲೆ ಮೇಲೆಯೇ ನಡೆಯುತ್ತಿದ್ದರು.ಆದರೆ  ನಾಲ್ವಡಿ ಕೃಷ್ಣ ರಾಜ ಒಡೆಯರ್ ಮೀಸಲಾತಿ ಕೊಟ್ಟರು. ಮೌಢ್ಯತೆ ಹೋಗಲಾಡಿಸಬೇಕು. ಮೌಢ್ಯತೆ ನಾಶ ಮಾಡಲಿಲ್ಲ ಅಂದರೆ 70 ವರ್ಷದ ಹಿಂದೆ ಇದ್ದ ಸ್ವತಂತ್ರ ಪೂರ್ವಕ್ಕೆ ಹೋಗಿ ಬಿಡುತ್ತೇವೆ. ನಮ್ಮ ವೇಷಭೂಷಣ ಬದಲಾಗುತ್ತೆ ಅಷ್ಟೇ ಹೊರೆತು ಹಿಂದೆ ಇದ್ದ ಹಾಗೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ .ಗಾಂಧಿ ಸರಳತೆಯ ಹಾದಿ ನಮಗೆ ಬೇಕೇ ಹೊರೆತು, ಯುದ್ಧ ಅಲ್ಲ ಎಂದರು.

ಸರ್ಕಾರ ಪೌರತ್ವ ದಾಖಲಾತಿ ಕೇಳಿದೆ. ನನ್ನ ತಂದೆ ಎಲ್ಲಿ ಹುಟ್ಟಿದ್ರು ಅಂತ ದಾಖಲಾತಿ ಇಲ್ಲ.ಇದೇ ತರ ಲಕ್ಷಾಂತರ ಜನರ ಬಳಿ ದಾಖಲಾತಿ ಇಲ್ಲ. ಹಾಗಂತ ಅವರನ್ನೆಲ್ಲ ದೇಶದಿಂದ ಹೊರಗೆ ಹಾಕಿಬಿಡುತ್ತೀರಾ ಎಂದರು.

ಲಂಡನ್ ನಗರದ ಕೌನ್ಸಿಲ್ ಸದಸ್ಯರಾದ ಕುಮಾರ್ ನಾಯಕ್ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಅನಿಲ್ ,ಪುರಾ ನಾಯಕ್,ತೇಜಾ ನಾಯಕ್,ಆರ್ ಬಿ ಐ ನ ಚಂದ್ರಶೇಖರ್, ಬಸವರಾಜ್ ನಾಯಕ್,ಸದಾನಂದ,ಹೇಮಂತ್ ಕುಮಾರ್, ಚೆನ್ನಪ್ಪ ಸೇರಿದಂತೆ 200 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: