ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ನೀತಿ ಸಂಹಿತೆ ಉಲ್ಲಂಘಿಸಿದರೇ ?

ಮೈಸೂರಿನ ನಂಜನಗೂಡಿನಲ್ಲಿ ಹಮ್ಮಿಕೊಂಡಿದ್ದ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವೇನೋ ಮುಗಿದಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ನೀತಿ ಸಂಹಿತಿ ಯನ್ನು ಉಲ್ಲಂಘಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ.

ಕಾರ್ಯಕ್ರಮ ಮುಗಿಸಿದ ಬಳಿಕ ಸಿಎಂ ನಂಜನಗೂಡಿನ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ಇದೇ ವೇಳೆ  ಅಲ್ಲೇ ಪಕ್ಕದಲ್ಲಿದ್ದ ಕನಕ ಕಲ್ಯಾಣ ಮಂಟಪದ ಕಾಮಗಾರಿಯನ್ನು ಕೂಡಾ ಪರಿಶೀಲನೆ ನಡೆಸಿದರು. ಇದೇ ವೇಳೆ ಟ್ರಸ್ಟ್ ನ ಮುಖಂಡರು ಕಾಮಗಾರಿಗೆ ಈಗಾಗಲೆ  ಒಂದೂವರೆ ಕೋಟಿ ಖರ್ಚು ಮಾಡಿದ್ದೇವೆ. ಎರಡನೇ ಹಂತದ ಕಾಮಗಾರಿಗೆ ಕನಿಷ್ಠ ಎರಡೂವರೆ ಕೋಟಿ ಹಣದ ಅವಶ್ಯಕತೆ ಇದೆ ಎಂದರು. ಈ ವೇಳೆ ಮುಖ್ಯಮಂತ್ರಿಗಳು ಸದ್ಯಕ್ಕೆ ಎರಡು ಕೋಟಿ ರೂ. ಕೊಡಿಸುವುದಾಗಿ ಮಹದೇವಪ್ಪನವರ ಕಡೆ ನೋಡಿ ಹೇಳಿದ್ದಾರೆ. ಇದಕ್ಕೆ ಟ್ರಸ್ಟ್‌ನವರು ಎರಡೂವರೆ ಕೋಟಿಯಾದರೂ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಆದರೆ ಸ್ಥಳೀಯರು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಚುನಾವಣೆ ಇರುವಾಗ ಕಾಮಗಾರಿ ವೀಕ್ಷಣೆ ಹಾಗೂ ಭರವಸೆ ನೀಡಬಾರದು ಎಂದಿದ್ದಾರೆ. ಕಾಮಗಾರಿ ವೀಕ್ಷಣೆ ವೇಳೆ, ಪಿರಿಯಾಪಟ್ಟಣ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ವೆಂಕಟೇಶ್, ಲೋಕೋಪಯೋಗಿ ಸಚಿವ ಹೆಚ್‌.ಸಿ.ಮಹದೇವಪ್ಪ ಹಾಗೂ ಸಿಎಂ ಪುತ್ರ ಯತೀಂದ್ರ ಮುಖ್ಯಮಂತ್ರಿಗಳ ಜೊತೆಗಿದ್ದರು. ಮುಖ್ಯಮಂತ್ರಿಗಳಿಗೆ ನೀತಿ ಸಂಹಿತೆ ಜಾರಿಯಲ್ಲಿರೋದು ಮರೆತು ಹೋಯಿತೇ ಎಂಬ ಮಾತುಗಳು ಸ್ಥಳೀಯರಿಂದ ಕೇಳಿ ಬಂದಿದೆ.  (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: