ಮೈಸೂರು

ಮೋರಿಗಳಲ್ಲಿ ಹಾವು-ಚೇಳುಗಳ ಓಡಾಟ : ಸ್ಥಳೀಯರಲ್ಲಿ ಆತಂಕ

ಮೈಸೂರಿನ ಮೋರಿ ಮೋರಿಗಳಲ್ಲೂ  ಹಾವು ಚೇಳುಗಳು ಓಡಾಟ ನಡೆಸಿವೆ. ಇದರಿಂದ ಬಡಾವಣೆಗಳಲ್ಲಿ ವಾಸವಿರುವುದಕ್ಕೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂ ಬಡಾವಣೆಯ ಮೋರಿಗಳಲ್ಲಿ ಹಾವುಗಳ ಓಡಾಟ ಪ್ರಾರಂಭವಾಗಿದೆ. ಲೀಲಾಜಾಲವಾಗಿ ಓಡಾಡುತ್ತಿರುವ ಬೃಹತ್ ಗಾತ್ರದ ಹಾವುಗಳನ್ನ‌ ಕಂಡು, ಸ್ಥಳೀಯರು ಆಂತಕ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋರಿಯನ್ನುಮೈಸೂರು ಮಹಾನಗರದ ಪಾಲಿಕೆಯ ಸಿಬ್ಬಂದಿಗಳು ಸ್ವಚ್ಛಗೊಳಿಸಿಲ್ಲ ಇದರಿಂದ ಹಾವುಗಳು ನಿರಾತಂಕವಾಗಿ ಓಡಾಟ ನಡೆಸಿವೆ ಎಂದು  ಸಾರ್ವಜನಿಕರು ದೂರಿದ್ದಾರೆ. ಹಾವು ಚೇಳುಗಳ ವಾಸಸ್ಥಾನವಾಗಿರುವ ಮೋರಿಯ ಬಳಿ ವಾಸವಿರೋದಕ್ಕೆ ಭಯವಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ. ಸ್ವಚ್ಛತೆಯ ಮಂತ್ರವನ್ನು ಸದಾ ಜಪಸಿಸುತ್ತಿರುವ ಪಾಲಿಕೆ ಮೋರಿಗಳನ್ನು ಸ್ವಚ್ಛಗೊಳಿಸಲು ಮಾತ್ರ ಕ್ರಮ ಕೈಗೊಂಡಿಲ್ಲ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: