ಮೈಸೂರು

ಪ್ರತಿಭಾನ್ವಿತ ಯುವಕರನ್ನು ವಿವಿಧ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ತರುವುದೇ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಉದ್ದೇಶ : ಹೆಚ್.ಎಸ್ ಸಚ್ಚಿದಾನಂದಮೂರ್ತಿ

ಮೈಸೂರು,ಫೆ.26:- ಮೈಸೂರು ಬ್ರಾಹ್ಮಣ ಸಂಘದ ವತಿಯಿಂದ ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿಂದು ಆಯೋಜಿಸಿದ್ದ “ವಿಪ್ರ ಚಿಂತನಾ ಸಭೆ ಹಾಗೂ ಕರ್ನಾಟಕ ಸರ್ಕಾರದ ನೂತನ ಬ್ರಾಹ್ಮಣ ಮಂಡಳಿಯ ಅಧ್ಯಕ್ಷರಾದ ಹೆಚ್.ಎಸ್ ಸಚ್ಚಿದಾನಂದ ಮೂರ್ತಿ ರವರಿಗೆ ಅಭಿನಂದನಾ ಸಮಾರಂಭವನ್ನು ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ‌ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಹೆಚ್.ಎಸ್ ಸಚ್ಚಿದಾನಂದಮೂರ್ತಿ  ಅಭಿನಂದನೆಯನ್ನು ಸ್ವೀಕರಿಸಿ ನಂತರ ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರ ಶ್ರೇಯೋಭಿವೃದ್ದಿಗಾಗಿ ಕರ್ನಾಟಕ ರಾಜ್ಯ ಸರ್ಕಾರದಿಂದ ಸ್ಥಾಪಿತವಾದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಲ್ಲಿ 25ಕೋಟಿ ರೂ ಅನುದಾನವಿದೆ, ಶಿಕ್ಷಣ ಆರೋಗ್ಯ ಉದ್ಯೋಗದ ವಿಚಾರವಾಗಿ ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಿಸುವ ವಿಪ್ರರರಿಗೆ ನೆರವು ನೀಡಿ ಪ್ರತಿಭಾನ್ವಿತ ಯುವಕರನ್ನು ವಿವಿಧ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ತರುವುದೇ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಉದ್ದೇಶವಾಗಿದೆ.  ಇದರಲ್ಲಿ ಜನಸಂಖ್ಯೆ ಆಧಾರದ ಮೇಲೆ ಸಮಾಜದ ಕಡುಬಡವರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕೊಡಿಸಲು ಸರ್ಕಾರದೊಂದಿಗೆ ಕಾನೂನಾತ್ಮಕವಾಗಿ ತಜ್ಞರನ್ನು ನೇಮಿಸಿ ಚರ್ಚಿಸಲಾಗುತ್ತಿದೆ. ವಿಪ್ರ ಪುರೋಹಿತರನ್ನು ಮತ್ತು ಬ್ರಾಹ್ಮಣ ಅಡುಗೆಯವರನ್ನು ಮದುವೆಯಾಗಲು ಮುಂದೆ ಬರುವ ಹೆಣ್ಣುಮಕ್ಕಳಿಗೆ 3ಲಕ್ಷರೂ ಬಾಂಡ್ ನೀಡಲು ಯೋಜನೆ ರೂಪಿಸಲಾಗುತ್ತಿದೆ.  ಶಿಕ್ಷಣಕ್ಕೆ 16ಕೋಟಿ ರೂ ಮೀಸಲಿದ್ದು ವಿದ್ಯಾರ್ಥಿವೇತನ ನೀಡಲಾಗುವುದು.  ಶಿಕ್ಷಣ ವೈದ್ಯಕೀಯ ನೆರವು ಅಥವಾ ಉದ್ಯೋಗದ ಸಮಸ್ಯೆ ವಿದ್ಯಾರ್ಥಿವೇತನ ವಿಷಯವಾಗಿ ಪ್ರಾಥಮಿಕವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅವಶ್ಯಕವಿದ್ದು ಇದರ ಬಗ್ಗೆ ಸದನದಲ್ಲಿ ಮಾತನಾಡುವಂತೆ ಶಾಸಕರಾದ ಎಸ್ .ಎ ರಾಮದಾಸ್  ಅವರೊಂದಿಗೆ ಇಂದು ಅವರ ಮನೆಗೆ ಭೇಟಿ ನೀಡಿ ಮನವಿ ಮಾಡಿ ಚರ್ಚಿಸಿದ್ದೇನೆ.  ಬಜೆಟ್ ನಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ.  ಮೈಸೂರಿನಲ್ಲಿ 1ಲಕ್ಷಕ್ಕೂ ಹೆಚ್ಚು ಬ್ರಾಹ್ಮಣರು ವಾಸವಿದ್ದು ಮುಂದಿನ ದಿನದಲ್ಲಿ ಸಂಘಟನಾತ್ಮಕವಾಗಿ ಮುಂದಾಗಬೇಕು.  ಬ್ರಾಹ್ಮಣ ಸಂಘ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕವಿಟ್ಟು ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಸವಲತ್ತು ಪಡೆಯಲು ಮುಂದಾಗಬೇಕು ಎಂದರು

ಬ್ರಾಹ್ಮಣ ಸಂಘದ ಅಧ್ಯಕ್ಷರಾದ  ಡಿಟಿ. ಪ್ರಕಾಶ್   ಮಾತನಾಡಿ ಕಳೆದ 10ವರ್ಷಗಳಿಂದ ಮೈಸೂರಿನಲ್ಲಿ ಬ್ರಾಹ್ಮಣ ಸಮುದಾಯ ಸಂಘಟನಾತ್ಮಕವಾಗಿ ಬಲಿಷ್ಠವಾಗಿದ್ದು, ಜಿಲ್ಲಾಮಟ್ಟದ ಬ್ರಾಹ್ಮಣ ಸಮಾವೇಶ, ರಾಜ್ಯಮಟ್ಟದ ಬ್ರಾಹ್ಮಣಯುವ ಸಮಾವೇಶ, ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಆಚರಣೆಗಳ ಮೂಲಕ ಸಹಸ್ರಾರು ಸಂಘಟಿತರನ್ನು ಬೇರ್ಮಟ್ಟದಲ್ಲಿ ಬಲಿಷ್ಠಗೊಳಿಸಿದೆ.  ಕರ್ನಾಟಕ ಸರ್ಕಾರದಿಂದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗಾಗಿ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮತ್ತು ಸನಾತನ ಧರ್ಮದ ಉಳಿವಿಗಾಗಿ ಆಚಾರ್ಯತ್ರಯರ ಜಯಂತಿಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕೆಂದು ಹೋರಾಟಗಳು ನಡೆಯುತ್ತಿತ್ತು.  ಇಂದು ಜಾರಿಗೆ ಬಂದಿರುವುದು ಬ್ರಾಹ್ಮಣ ಸಂಘ ಸಂಸ್ಥೆಗಳ ಹೋರಾಟಕ್ಕೆ ಸಂದ ಜಯವಾಗಿದೆ.  ಜಾತಿಪ್ರಮಾಣ ಪತ್ರ ಮತ್ತು ಆದಾಯಪತ್ರವನ್ನು ಬ್ರಾಹ್ಮಣ ಸಮುದಾಯಕ್ಕೆ ಕರ್ನಾಟಕ ಸರ್ಕಾರ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭ ಬಿಜೆಪಿ ಮುಖಂಡರಾದ ಎಚ್ ವಿ ರಾಜೀವ್ ,ಬಿಜೆಪಿ ನಗರ ಅಧ್ಯಕ್ಷ ರಾದ ಶ್ರೀವತ್ಸ ,ಹಿರಿಯ ಸಮಾಜ ಸೇವಕರಾದ ಡಾ.ಕೆ ರಘುರಾಂ ವಾಜಪೇಯಿ ,ಶ್ರೀ ಕೃಷ್ಣಮೂರ್ತಿಪುರಂ ರಾಮಮಂದಿರ ಕಾರ್ಯದರ್ಶಿಗಳಾದ ಮಾಧುರಾವ್ ,ನಗರ ಪಾಲಿಕೆ ಸದಸ್ಯರಾದ ಮಾ.ವಿ. ರಾಮಪ್ರಸಾದ್, ಎಂ ಸಿ ರಮೇಶ್ ,ಮಾಜಿ ಮಹಾಪೌರರಾದ ಆರ್ ಜೆ ನರಸಿಂಹ ಅಯ್ಯಂಗಾರ್ ,ಗ್ರಾಮಾಂತರ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಗೋಪಾಲರಾವ್ ,ಅಗಸ್ತ್ಯ  ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷರಾದ ಸಿ ವಿ ಪಾರ್ಥಸಾರಥಿ ,ಎಂಆರ್ ಬಾಲಕೃಷ್ಣ ,ಬ್ರಾಹ್ಮಣ ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ ,ಕಡಕೊಳ ಜಗದೀಶ್,ಕೆಎಂ ನಿಶಾಂತ್ , ಸುಚೀಂದ್ರ, ಚಕ್ರಪಾಣಿ,ರಾಜಗೋಪಾಲ್ , ಜ್ಯೋತಿ,ಲತಾ ಬಾಲಕೃಷ್ಣ, ನಾಗಶ್ರೀ,ಮುಳ್ಳೂರು ಸುರೇಶ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: