ಮೈಸೂರು

 ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ದಶಕಗಳಿಂದ ಗಾಂಜಾ ದಂದೆಯಲ್ಲಿ ತೊಡಗಿದ್ದ ಇಬ್ಬರ ಬಂಧನ ; 23 ಕೆ.ಜಿ. 567 ಗ್ರಾಂ ಗಾಂಜಾ ವಶ

ಮೈಸೂರು,ಫೆ.26:- 24/02/2020 ರಂದು ನಗರದ ಸಿಸಿಬಿ ಪೊಲೀಸರು ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕೆ.ಆರ್.ಎಸ್ ರಸ್ತೆಯಲ್ಲಿರುವ ಪಿ.ಕೆ.ಟಿ.ಬಿ ಆಸ್ಪತ್ರೆ ಎದುರು ಇರುವ ಬಸ್ ಸ್ಟ್ಯಾಪ್ ಬಳಿ ದಾಳಿ ಮಾಡಿ ಅಲ್ಲಿ ಒಂದು ಕಿಟ್ ಬ್ಯಾಗ್‍ನಲ್ಲಿ ಗಾಂಜಾವನ್ನು ತುಂಬಿಕೊಂಡು ಯಾರಿಗೋ ಮಾರಾಟ ಮಾಡಲು ನಿಂತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಸಿದ್ದರಾಜು ಬಿನ್ ಕಾಳೇಗೌಡ ( 60), ಬೆಳಗೊಳ ಗ್ರಾಮ, ಶ್ರೀರಂಗಪಟ್ಟಣ ತಾಲೂಕು, ಮಂಡ್ಯ ಜಿಲ್ಲೆ ಎಂಬವನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ 5 ಕೆ.ಜಿ 450 ಗ್ರಾಂ ತೂಕದ ಗಾಂಜಾ ಮತ್ತು 1400ರೂ. ನಗದು ಹಣವನ್ನು ವಶಪಡಿಸಿಕೊಂಡು ನಂತರ ಈ ಸಂಬಂಧ ನಗರದ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಈತನನ್ನು ವಿಚಾರಣೆಗೊಳಪಡಿಸಿದಾಗ ಈತ  ಕಳೆದ ಸುಮಾರು 30 ವರ್ಷಗಳಿಂದ ಕೆ.ಆರ್.ಎಸ್, ಹುಲಿಕೆರೆ ವೃತ್ತದ ಎಡತಿಟ್ಟು ಗ್ರಾಮದ ಕಾವೇರಿ ನದಿ ಹರಿಯುವ ನದಿ ಬಯಲು ಪ್ರದೇಶದಲ್ಲಿ ದ್ವೀಪಗಳಲ್ಲಿ ಇತರೆ ಮರಗಿಡಗಳ ಪೊದೆಗಳಲ್ಲಿ ಯಾರಿಗೂ ಕಾಣದಂತೆ ಗಾಂಜಾ ಗಿಡಗಳನ್ನು ಬೆಳೆಸಿ ನಂತರ ಅದನ್ನು ಕಟಾವು ಮಾಡಿ ಗೌಪ್ಯವಾಗಿ ಬೆಳಗೊಳದಲ್ಲಿರುವ ತನ್ನ ಟೀ ಸ್ಟಾಲ್ ಅಂಗಡಿಯಲ್ಲಿ ಮತ್ತು ಮೈಸೂರು  ನಗರಕ್ಕೆ ಬಂದು ತಾನು ಮತ್ತು ತನ್ನ ಮಗ ಮಂಜುನಾಥ ಬಿ.ಎಸ್, ಎಂಬುವವರು ಸೇರಿಕೊಂಡು ಮಾರಾಟ

ಮಾಡುತ್ತಿರುವುದಾಗಿ ತಿಳಿಸಿದ್ದ. ಇದನ್ನಾಧರಿಸಿ ಈತನ ಬೆಳಗೊಳದಲ್ಲಿರುವ ಮಂಜುನಾಥ ಟೀ ಸ್ಟಾಲ್ ಮೇಲೆ   25/02/2020 ರಂದು ದಾಳಿ ನಡೆಸಿ ಅಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ  ಮಂಜುನಾಥ ಬಿ.ಎಸ್. ಬಿನ್ ಸಿದ್ದರಾಜು, (36), ಬೆಳಗೊಳ ಶ್ರೀರಂಗಪಟ್ಟಣ ತಾಲೂಕು, ಮಂಡ್ಯ ಜಿಲ್ಲೆ ಎಂಬವನನ್ನು ದಸ್ತಗಿರಿ ಮಾಡಿ ಆತನು   ಅಂಗಡಿಯಲ್ಲಿ ಮಾರಾಟ ಮಾಡಲು ಇಟ್ಟುಕೊಂಡಿದ್ದ  18 ಕೆ.ಜಿ, 117 ಗ್ರಾಂ ತೂಕದ ಗಾಂಜಾ ಮತ್ತು 5380  ರೂ ನಗದು ಹಣವನ್ನು ವಶ ಪಡಿಸಿಕೊಂಡಿರುತ್ತಾರೆ.

ಮಂಜುನಾಥ  ಇದೇ ರೀತಿ ತನ್ನ ಅಂಗಡಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂಬಂಧ ಈ ಹಿಂದೆ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿ ಜೈಲಿಗೂ ಸಹ ಹೋಗಿ ಬಂದಿದ್ದಾನೆ. ಈ ಕುರಿತು ಸಿಸಿಬಿ ಘಟಕದಲ್ಲಿ ಸಮಗ್ರ ತನಿಖೆ ಮುಂದುವರೆದಿದೆ  ಎಂದು ಪೊಲೀಸರು ತಿಳಿಸಿದರು.

ಈ ದಾಳಿಕಾರ್ಯವನ್ನು ಪೊಲೀಸ್ ಆಯುಕ್ತರವರಾದ ಡಾ. ಚಂದ್ರಗುಪ್ತ  ಹಾಗೂ ಡಿಸಿಪಿ ಡಾ. ಎ.ಎನ್.ಪ್ರಕಾಶ್‍ಗೌಡ  ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ  ವಿ.ಮರಿಯಪ್ಪ  ನೇತೃತ್ವದಲ್ಲಿ ಸಿಸಿಬಿ ಘಟಕದ ಇನ್ಸಪೆಕ್ಟರ್‍ ಗಳಾದ ಮಲ್ಲೇಶ.ಎ, ವಿವೇಕಾನಂದ ಹೆಚ್.ಆರ್, ಕಿರಣ್‍ಕುಮಾರ್.ಸಿ ಮತ್ತು ಸಿಬ್ಬಂದಿಯವರಾದ ಆರ್.ರಾಜು, ಜೋಸೆಫ್ ನರ್ಹೋನ, ಶ್ರೀನಿವಾಸ ಪ್ರಸಾದ್.ಡಿ, ದೀಪಕ್ ಡಬ್ಲ್ಯೂ.ಡಿ, ಗಣೇಶ್ ಎಮ್.ಆರ್, ಅರುಣ್‍ಕುಮಾರ್ ಕೆ.ಸಿ, ನಾಗೇಶ ಎನ್.ಎಮ್, ಪುನೀತ್ ಹೆಚ್.ಎಸ್, ಸಣ್ಣೇಗೌಡರ  ತಂಡ ಮಾಡಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: