ಮೈಸೂರು

ಜ್ಯೋತಿಷ್ಯ ಆಚಾರ್ಯ ಮುರಳೀಧರ ರಾವ್ ನಿಧನ

ಮೈಸೂರು, ಫೆ.26:- ನಗರದ ಅಗ್ರಹಾರದ ಹತ್ತಿರ ಇರುವ ಜ್ಯೋತಿಷ್ಯ ಕೇಂದ್ರದಲ್ಲಿ ಬಹಳ ವರ್ಷಗಳಿಂದ ಜ್ಯೋತಿಷ್ಯ ಹೇಳಿಕೊಂಡಿದ್ದ ಜ್ಯೋತಿಷ್ಯ ಆಚಾರ್ಯ, ಸಮಾಜ ಸೇವಕ ಮುರಳೀಧರ ರಾವ್ (73) ಇಂದು ಸಂಜೆ ಆರೋಗ್ಯದ ಏರುಪೇರಿಂದಾಗಿ ಅಕಾಲಿಕ ನಿಧನ ಹೊಂದಿದರು.
ಮೃತರು ಓರ್ವ ಪುತ್ರ ಜ್ಯೋತಿಷ್ಯ ಸಾಮ್ರಾಟ್ ವಿವೇಕ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ಬೆಳಿಗ್ಗೆ 11 ಗಂಟೆಗೆ ವಿದ್ಯಾರಣ್ಯಪುರಂನಲ್ಲಿರುವ ಹರಿಶ್ಚಂದ್ರಘಾಟ್‍ನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. (ಎಸ್.ಎಚ್)

Leave a Reply

comments

Related Articles

error: