ಪ್ರಮುಖ ಸುದ್ದಿ

ಜಿಲ್ಲಾ ಮಟ್ಟದ ಮುಸ್ಲಿಂ ಫುಟ್ಬಾಲ್ ಪಂದ್ಯಾವಳಿಗೆ ಏ.9 ರಂದು ಚೆರಿಯಪರಂಬುವಿನಲ್ಲಿ ಚಾಲನೆ

ರಾಜ್ಯ( ಮಡಿಕೇರಿ) ಫೆ.27 :- ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಮೂರನೇ ವರ್ಷದ ಕೊಡಗು ಜಿಲ್ಲಾ ಮಟ್ಟದ ಮುಸ್ಲಿಂ ಫುಟ್ಬಾಲ್ ಪಂದ್ಯಾವಳಿ ಏ.9 ರಿಂದ 11 ವರೆಗೆ ನಾಪೋಕ್ಲುವಿನ ಚೆರಿಯಪರಂಬು ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕ್ಲಬ್‍ನ ಕಾರ್ಯದರ್ಶಿ ಕೆ.ಎ.ಹಾರಿಸ್ ಹಾಗೂ ಕೊಡಗು ಮುಸ್ಲಿಂ ಫುಟ್ಬಾಲ್ ಕಪ್ ಪಂದ್ಯಾವಳಿಯ ಅಧ್ಯಕ್ಷ ಆಶಿಫ್(ಆಪು)ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮೊದಲನೇ ವರ್ಷದ ಮುಸ್ಲಿಂ ಫುಟ್ಬಾಲ್ ಪಂದ್ಯಾವಳಿ ಮೂರ್ನಾಡು ಹಾಗೂ ಎರಡನೇ ವರ್ಷದ ಪಂದ್ಯಾವಳಿ ಕೊಂಡಂಗೇರಿಯಲ್ಲಿ ಕೆವೈಸಿ ಆಶ್ರಯದಲ್ಲಿ ಕೊಂಡಂಗೇರಿಯಲ್ಲಿ ಯಶಸ್ವಿಯಾಗಿ ಆಯೋಜಿಸಲ್ಪಟ್ಟಿತ್ತು. ಈ ಬಾರಿಯ ಪಂದ್ಯಾವಳಿ ನಾಪೋಕ್ಲುವಿನ ಚೆರಿಯಪರಂಬುವಿನಲ್ಲಿ ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು.
ಪಂದ್ಯಾವಳಿ 7+2 ಆಟಗಾರರನ್ನು ಒಳಗೊಂಡ ತಂಡಗಳಿಗೆ ಸೀಮಿತವಾಗಿ ನಡೆಯಲಿದ್ದು, 100 ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸುವ ನಿರೀಕ್ಷೆ ಇರುವುದಾಗಿ ತಿಳಿಸಿದ ಅವರು, ಪಂದ್ಯಾವಳಿಯ ಕ್ವಾರ್ಟರ್ ಫೈನಲ್‍ನಿಂದ ಫೈನಲ್‍ವರೆಗಿನ ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಆಟಗಾರರು ತಮ್ಮ ಜಮಾಅತ್ ತಂಡದಲ್ಲಿ ಮಾತ್ರ ಪಾಲ್ಗೊಳ್ಳಲು ಅನುಮತಿ ನೀಡಲಾಗಿದ್ದು, ಪಂದ್ಯಾವಳಿ ಸಂದರ್ಭ ಪ್ರತಿ ಆಟಗಾರರು ತಮ್ಮ ದಾಖಲಾತಿ ಹಾಜರುಪಡಿಸಬೇಕೆಂದು ಸ್ಪಷ್ಟಪಡಿಸಿದರು.
ಆಸಕ್ತ ತಂಡಗಳು ಮಾ.30 ರೊಳಗೆ ತಮ್ಮ ದಾಖಲೆಗಳನ್ನು ಹಾಜರುಪಡಿಸುವ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದ ಅವರು, ಹೆಚ್ಚಿನ ಮಾಹಿತಿಗಾಗಿ 8105376990, 8105919995, 9590185332 ವನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಪಂದ್ಯಾವಳಿ ವಿಜೇತ ತಂಡಕ್ಕೆ ತಂಡಕ್ಕೆ 55,555 ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 29,999 ರೂ. ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ, ಸೆಮಿಫೈನಲ್ ಹಂತಕ್ಕೆ ತಲುಪಿದ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದೆಂದರು.
ಕ್ರೀಡಾ ಧ್ವಜ ಹಸ್ತಾಂತರ- ಇದೇ ಸಂದರ್ಭ ಕೊಡಗು ಜಿಲ್ಲಾ ಮಟ್ಟದ ಮುಸ್ಲಿಂ ಫುಟ್ಬಾಲ್ ಪಂದ್ಯಾವಳಿಯ ಧ್ವಜವನ್ನು ಕೆವೈಸಿ ಮತ್ತು ಕೊಡಗು ಮುಸ್ಲಿಂ ಫುಟ್ಬಾಲ್ ಕಪ್ ಪದಾಧಿಕಾರಿಗಳು ಡೆಕ್ಕನ್ ಯೂತ್ ಕ್ಲಬ್ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಸುದ್ದಿಗೋಷ್ಠಿಯಲ್ಲಿ ಡೆಕ್ಕನ್ ಯೂತ್ ಕ್ಲಬ್ ಸದಸ್ಯ ಎಂ.ಎಂ.ಅಬ್ದುಲ್ ಮುತ್ತಲಿಬ್, ಸದಸ್ಯರಾದ ಪಿ.ಯು. ಅಬ್ದುಲ್ ಖಾದರ್, ಕೆ.ಎ. ಮನ್ಸೂರ್ (ಸುರ) ಹಾಗೂ ಕೆವೈಸಿ ಅಧ್ಯಕ್ಷ ಹೆಚ್.ಯು. ನಾಸಿರ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: