ಪ್ರಮುಖ ಸುದ್ದಿ

ನಾಳೆಯಿಂದ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ಆರಂಭ

ರಾಜ್ಯ( ಮಡಿಕೇರಿ) ಫೆ.27 :- ಎಮ್ಮೆಮಾಡಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಹಝ್ರತ್ ಸೂಫಿ ಶಹೀದ್ ಮತ್ತು ಸಯ್ಯಿದ್ ಹಸನ್ ಸಖಾಫಿ ಅಲ್ ಅಳ್‍ರಮಿ ಹಾಗೂ ಇತರ ಮಹಾನುಭವರ ಹೆಸರಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಉರೂಸ್ ಸಮಾರಂಭ ಫೆ. 28 ರಿಂದ ಮಾ. 6ರ ವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಎಮ್ಮೆಮಾಡು ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ.ಎ. ಇಬ್ರಾಹಿಂ ಸಅದಿ ಉರೂಸ್ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನಿತ್ತರು. ಫೆ. 28 ರಂದು ಮಖಾಂ ಝಿಯಾರತ್ ನಂತರ ಸಯ್ಯಿದ್ ಲಿಯಾವುಲ್ ಮುಸ್ತಫ ಹಾಮಿದ್ ಕೊಯಮ್ಮ ತಂಙಳ್ ಮಾಟೂಲ್ ಅವರ ನೇತೃತ್ವದಲ್ಲಿ ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಕೆ.ಎಸ್. ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದು, ಸಯ್ಯಿದ್ ಮುನವ್ವರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಅವರು ಉರೂಸ್ ಮತ್ತು ಸಾಮೂಜಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.
ಮುಖ್ಯ ಭಾಷಣಕಾರರಾಗಿ ಎಮ್ಮೆಮಾಡು ಖತೀಬರಾದ ಹಾಫಿಳ್ ಪಳುಲುರ್ರಹ್ಮಾನ್ ಸಖಾಫಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 8 ಗಂಟೆಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಎಮ್ಮೆಮಾಡು ಮುದರ್ರಿಸ್ ಉಮ್ಮರ್ ಸಖಾಫಿ ಅಝ್‍ಹರಿ ಅಲ್ ಕಾಮಿಲಿ ಉದ್ಘಾಟಿಸಲಿದ್ದಾರೆ. ಹಾಫಿಳ್ ವುಶ್ಹೂದ್ ಸಖಾಫಿ ಗೂಡಲ್ಲೂರು ಆಧ್ಯಾತ್ಮಿಕತೆ ಫಲ ಎಂಬ ವಿಷಯದ ಕುರಿತು ಧಾರ್ಮಿಕ ಪ್ರವಚನ ಮಾಡಲಿದ್ದಾರೆ ಎಂದು ತಿಳಿಸಿದರು.
ಫೆ.29 ರಂದು ರಾತ್ರಿ 8 ಗಂಟೆಗೆ ಬದುರುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಅವರ ನೇತೃತ್ವದಲ್ಲಿ ದ್ಸಿಕ್ರ್ ಹಲ್ಖ ನಡೆಯಲಿದ್ದು, ಎಮ್ಮೆಮಾಡು ಖತೀಬರಾದ ಹಾಫಿಳ್ ಪಳುಲುರ್ರಹ್ಮಾನ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಫಿ ಸಖಾಫಿ ಮುಂಡಂಬ್ರ ‘ಕುರ್‍ಆನ್‍ನ ಒಳನೋಟ’ ಎಂಬ ವಿಷಯದ ಕುರಿತು ಧಾರ್ಮಿಕ ಪ್ರವಚನ ನೀಡಲಿದ್ದು, ಸಮಸ್ತ ಉಪಾಧ್ಯಕ್ಷ ಸಿರಾಜುಲ್ ಉಲಮಾ ಹೈದ್ರೋಸ್ ಮುಸ್ಲಿಯಾರ್ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.
ಮಾ. 1 ರಂದು ಮಗ್ರಿಬ್ ಬಳಿಕ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಉಪಾಧ್ಯಕ್ಷ ತಾಜುಶ್ಯರಿಅ ಆಲಿಕುಂಞ ಉಸ್ತಾದ್ ಅವರ ನೇತೃತ್ವದಲ್ಲಿ ಖತಂ ದುಆ ನಡೆಯಲಿದೆ. ರಾತ್ರಿ 8 ಗಂಟೆಗೆ ಮಟ್ಟನ್ನೂರು ಟೌನ್ ಜುಮ್ಮಾ ಮಸೀದಿಯ ಖತೀಬರಾದ ಮುಸ್ತಫ ಹುದವಿ ಆಕೋಡ್ ‘ದುರ್ಬಲಗೊಳ್ಳುತ್ತಿರುವ ಸಂಬಂಧಗಳು’ ಎಂಬ ವಿಷಯದ ಕುರಿತು ಪ್ರವಚನ ಮಾಡಲಿದ್ದಾರೆ.
ಮಾ. 2 ರಂದು ಮಧ್ಯಾಹ್ನ 12 ಗಂಟೆಗೆ ಉರೂಸ್ ಸಮ್ಮೇಳನ ನಡೆಯಲಿದ್ದು, ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲೆಯ ಖಾಝಿ ತಾಜುಲ್ ಫುಖಹಾಅ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ವಹಿಸಲಿದ್ದು, ಮುಖ್ಯ ಭಾಷಣಕಾರರಾಗಿ ಪ್ರಿನ್ಸಿಪಾಲ್, ಕುಟ್ಯಾಡಿ ಸಿರಾಜುಲ್ ಹುದಾ ಪ್ರಾಂಶುಪಾಲೆ ಮೌಲಾನಾ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ ಭಾಗವಹಿಸಲಿದ್ದು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಶಾಫಿ ಸದಿ ಕನ್ನಡದಲ್ಲಿ ಭಾಷಣ ಮಾಡಲಿದ್ದಾರೆ.ರಾತ್ರಿ 8 ಗಂಟೆಗೆ ನೌಫಲ್ ಸಖಾಫಿ ಕಳಸ ‘ಯುವತ್ವ ವಿನಾಶದತ್ತ’ ಎಂಬ ವಿಷಯದ ಕುರಿತು ಧಾರ್ಮಿಕ ಪ್ರವಚನ ಮಾಡಲಿದ್ದಾರೆಂದರು.
ಮಾ.3 ರಂದು ರಾತ್ರಿ 8 ಗಂಟೆಗೆ ಧಾರ್ಮಿಕ ಪ್ರವಚನ ನಡೆಯಲಿದ್ದು, ಕಿಲ್ಲೂರು ತಂಙಳ್ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಉದ್ಘಾಟಿಸಲಿದ್ದಾರೆ. ಅಬ್ದುರ್ರಹ್ಮಾನ್ ದಾರಿಮಿ ಕೂಟಂಬಾರ ‘ ಸಂತುಷ್ಟ ಕುಟುಂಬ’ ಎಂಬ ವಿಷಯದ ಕುರಿತು ಧಾರ್ಮಿಕ ಪ್ರವಚನ ಮಾಡಲಿದ್ದಾರೆ.
ಮಾ. 4 ರಂದು ಬೆಳಗ್ಗೆ 10 ಗಂಟೆಗೆ ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್‍ಬುಖಾರಿ ನೇತೃತ್ವದಲ್ಲಿ ದುಆ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಮಡವೂರು ಮುದರೀಸ್ ಅಬ್ದುಲ್ ಜಲೀಲ್ ಬಾಖವಿ ‘ ನಶಿಸುತ್ತಿರುವ ನೈತಿಕತೆ’ ಎಂಬ ವಿಷಯದ ಕುರಿತು ಧಾರ್ಮಿಕ ಪ್ರವಚನ ಮಾಡಲಿದ್ದಾರೆ.
ಮಾ. 5 ರಂದು ಮುಗ್ರಿಬ್ ಬಳಿಕ ಸ್ವಲಾತ್ ಮಜ್ಲ್ಲಿಸ್ ನಡೆಯಲಿದ್ದು, ಇದರ ನೇತೃತ್ವವನ್ನು ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ವಹಿಸಲಿದ್ದಾರೆ. ರಾತ್ರಿ 8 ಗಂಟೆಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಎರುಮಾಡ್ ತಂಙಳ್ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ಕಾಮಿಲ್ ಸಖಾಫಿ ಉದ್ಘಾಟಿಸಲಿದ್ದು, ಅಬ್ದುಲ್ ರಶೀದ್ ಸಖಾಫಿ ಏಲಂಕುಳಂ ‘ಜೀವನ ಮತ್ತು ನಂಬಿಕೆ’ ಎಂಬ ವಿಷಯದ ಕುರಿತು ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಮಾ. 6 ರಂದು ಜುಮಾ ನಮಾಝ್ ನಂತರ ಸಮಾರೋಪ ಸಮ್ಮೇಳನ ನಡೆಯಲಿದ್ದು, ಉಜಿರೆ ಸಯ್ಯಿದ್ ಜಲಾಲುದ್ದೀನ್ ಅಲ್‍ಹಾದಿ ತಂಙಳ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನೀಲೇಶ್ವರದ ಖಾಝಿಗಳಾದ ಇ.ಕೆ. ಅಲ್‍ಹಾಜ್ ಮಹಮೂದ್ ಮುಸ್ಲಿಯಾರ್ ವಹಿಸಲಿದ್ದಾರೆ. ಹಿಫ್ಳುಲ್ ಕುರ್‍ಆನ್ ವಿದ್ಯಾರ್ಥಿಗಳಿಗೆ ಸನದುದಾನ ನಡೆಯಲಿದ್ದು, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಪಿ.ಎ. ಇಬ್ರಾಹಿಂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಮ್ಮೆಮಾಡು ಜಮಾಅತ್ ಉಪಾಧ್ಯಕ್ಷ ಸಿ.ಎಂ. ಅಬ್ದುಲ್ ಖಾದರ್ ಹಾಗೂ ಸದಸ್ಯ ಸಿ.ಹೆಚ್. ಮೊಯ್ದು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: