ಪ್ರಮುಖ ಸುದ್ದಿ

ಅರೆಭಾಷೆ ಸಾಂಸ್ಕೃತಿಕ ಕೇಂದ್ರದ ಸ್ಥಾಪನೆ ಸ್ವಾಗತಾರ್ಹ : ಕೊಡವ ಕುಂದ್ ಬಗ್ಗೆಯೂ ಕಾಳಜಿ ವಹಿಸಲು ಸಿಎನ್‍ಸಿ ಮನವಿ

ರಾಜ್ಯ( ಮಡಿಕೇರಿ) ಫೆ.27 :- ಅರೆಭಾಷೆ ಸಮುದಾಯದ ಸಹೋದರರ ಸಂಸ್ಕೃತಿಯ ಅನಾವರಣ ಮತ್ತು ರಕ್ಷಣೆಗಾಗಿ ಸುಳ್ಯ ಪಟ್ಟಣದಲ್ಲಿ ಅರೆಭಾಷೆ ಸಾಂಸ್ಕೃತಿಕ ಕೇಂದ್ರ ಸ್ಥಾಪನೆಯ ಕುರಿತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ನೀಡಿರುವ ಭರವಸೆ ಸ್ವಾಗತಾರ್ಹವೆಂದು ತಿಳಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ, ಅರೆಭಾಷೆ ಸಂಸ್ಕೃತಿ ಮೇಳೈಸಲು ತಕ್ಕುದಾದ ಪ್ರದೇಶವೆಂದು ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಬುಡಕಟ್ಟು ಸಮುದಾಯವಾದ ಕೊಡವರ ವಿಶಿಷ್ಟ ಸಂಸ್ಕೃತಿಯನ್ನು ಸಂರಕ್ಷಿಸಲು ಸಹಕಾರಿಯಾಗಬಲ್ಲ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಕೇಂದ್ರವನ್ನು ಪಡೆಯಲು ಕೊಡವರು ಕೂಡ ಉತ್ಸುಕರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ “ಕೊಡವ ಕುಂದ್” ನ ಬೇಡಿಕೆ ಬಗ್ಗೆ ಸಿಎನ್‍ಸಿ ಸಂಘಟನೆ ಆಡಳಿತ ವ್ಯವಸ್ಥೆಯ ಗಮನ ಸೆಳೆಯುತ್ತಲೇ ಬಂದಿದ್ದು, ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ತೋರಿ ಕೊಡವರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: