ಪ್ರಮುಖ ಸುದ್ದಿ

ವಿಜ್ಞಾನ ಮಾದರಿಗಳ ಪ್ರದರ್ಶನ : ರಾಷ್ಟ್ರ ಮಟ್ಟಕ್ಕೆ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

ರಾಜ್ಯ( ಮಡಿಕೇರಿ) ಜ.27 :- ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ, 14 ಮತ್ತು 15ರಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ, ಆದಿಚುಂಚನಗಿರಿ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ ಇಲ್ಲಿ 2019-20ನೇ ಸಾಲಿನ ಇನ್‍ಸ್ಪೈರ್ ಮಾನಕ್ ಅವಾರ್ಡ್ ರಾಜ್ಯ ಹಂತದ ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಮಡಿಕೇರಿ ತಾಲೂಕಿನ ಒಟ್ಟು 14 ವಿದ್ಯಾರ್ಥಿಗಳ ಪೈಕಿ ರಾಷ್ಟ್ರ ಮಟ್ಟಕ್ಕೆ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಗಾಯತ್ರಿ ಅವರು ತಿಳಿಸಿದ್ದಾರೆ.

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸಂತ ಮೈಕಲರ ಪ್ರೌಢಶಾಲಾ 8ನೇ ತರಗತಿ ವಿದ್ಯಾರ್ಥಿ ಜೊಯಲ್ ಜಾರ್ಜ್ “ಸ್ಮಾರ್ಟ್ ಡ್ರೈವಿಂಗ್ ಲೈಟ್” ವಿಧಾನದಿಂದ ರಾತ್ರಿ ವೇಳೆಯಲ್ಲಿ ಪ್ರಯಾಣದಲ್ಲಿರುವ ವಾಹನದ ಚಾಲಕನಿಗೆ, ಎದುರಿನಿಂದ ಬರುವ ವಾಹನಗಳ ಹೆಡ್‍ಲೈಟ್‍ನ ಬೆಳಕಿನ ತೀವ್ರತೆಯನ್ನು ಸ್ವತಃ ಕಡಿಮೆ ಖರ್ಚಿನಲ್ಲಿ ಯಾವ ರೀತಿ ಸಿದ್ಧಪಡಿಸಿಕೊಳಬಹುದು ಮತ್ತು ಜ್ಞಾನೋದಯ ಆಂಗ್ಲ ಮಾಧ್ಯಮ ಕೋರಂಗಾಲ ಶಾಲಾ 10ನೇ ತರಗತಿ ವಿದ್ಯಾರ್ಥಿ ಶೃಜನ್ ಬಿ.ಎಸ್. “ಸೆನ್ಸರ್ ಅಂಬ್ರಲ್ಲಾ” ವಿಧಾನದಿಂದ ಜನರು ಬಿಸಿಲಿನಲ್ಲಿ ಒಣಹಾಕಿದ ಆಹಾರ ಧಾನ್ಯಗಳನ್ನು, ಸಂತೆ ವ್ಯಾಪಾರಿಗಳು ಮಾರಾಟದ ವಸ್ತುಗಳನ್ನು ತಕ್ಷಣದ ಅವಧಿಯಲ್ಲಿ ಬರುವ ಮಳೆಯಿಂದ ಹೇಗೆ ರಕ್ಷಿಸಬಹುದು ಎಂಬ ಉತ್ತಮ ಅಂಶವನ್ನು ಒಳಗೊಂಡಿತ್ತು.

ಪ್ರತಿಯೊಂದು ಮಗುವು ವಿಭಿನ್ನ ಮತ್ತು ಅನನ್ಯ. ಪ್ರತಿಯೊಂದು ಮಗುವಿನಲ್ಲಿಯೂ ವಿಶೇಷವಾದ ಸಾಮರ್ಥ್ಯ, ಕೌಶಲ್ಯ ಮತ್ತು ಪ್ರತಿಭೆಯು ಅಂತರ್ಗತವಾಗಿರುತ್ತದೆ. ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರಸೆಳೆಯುವುದು. ಮಾರ್ಗದರ್ಶಿ ಶಿಕ್ಷಕರಿಗೆ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಮಡಿಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಟಿ.ಎನ್. ಅವರು ಇಲಾಖಾ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: