ಪ್ರಮುಖ ಸುದ್ದಿ

ಮಡಿಕೇರಿಯಲ್ಲಿ ಫೆ.29 ರಂದು ಉದ್ಯೋಗ ಮೇಳ

ರಾಜ್ಯ( ಮಡಿಕೇರಿ )ಜ.27 :-  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆಬ್ರವರಿ, 29 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗಮೇಳ ನಡೆಯಲಿದೆ.

ಉದ್ಯೋಗ ಮೇಳದಲ್ಲಿ ನೆಪ್ಟ್ ಬೆಂಗಳೂರು, ಐಸಿಸಿಎಸ್ ಬಿಪಿಎಮ್, ಮೈಸೂರು, ಕೆಫೆ ಕಾಫಿ ಡೇ, ಮೈಸೂರು, ಯುರೇಕಾ ಪೋರ್‍ಬಸ್ ಬೆಂಗಳೂರು, ಕ್ಲಬ್ ಮಹೆಂದ್ರ, ಮಡಿಕೇರಿ ಹಾಗೂ ಬಿಎಸ್‍ಎನ್‍ಎಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಉಡುಪಿ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಎಸ್‍ಎಸ್‍ಎಲ್‍ಸಿ. ಪಿಯುಸಿ, ಐಟಿಐ, ಡಿಪ್ಲೋಮ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗಮೆಳದಲ್ಲಿ  ಭಾಗವಹಿಸಬಹುದು. ವಿದ್ಯಾರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಾಲತಿಗಳು, ಅನುಭವ ಪ್ರಮಾಣ ಪತ್ರ, (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ ವಿವರಗಳ ಪ್ರತಿಗಳೊಂದಿಗೆ ಉದ್ಯೋಗಮೇಳದಲ್ಲಿ ಹಾಜರಾಗುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: