
ಮೈಸೂರು
ಮಹಿಳೆ ಕಾಣೆಯಾಗಿದ್ದಾರೆ : ದೂರು
ಮೈಸೂರು,ಫೆ.27:- ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಟರಂಗಮ್ಮ (45 ವರ್ಷ) ಎಂಬವರು ಫೆಬ್ರವರಿ 17 ರಂದು ಬಸ್ ನಿಲ್ದಾಣದ ಕಡೆ ಹೋಗಿ ಬರುತ್ತೇನೆಂದು ಹೋದವರು ಮರಳಿ ಬರದೇ ಕಾಣೆಯಾಗಿದ್ದಾರೆ.
ಪುಟ್ಟರಂಗಮ್ಮರಿಗೆ ಒಂದು ಕಣ್ಣು ಕಾಣುತ್ತಿರಲಿಲ್ಲ. ಕಾಣೆಯಾದಾಗ ಕುಟುಂಬಸ್ಥರು ಅಕ್ಕ ಪಕ್ಕದ ಮನೆಯಲ್ಲಿ, ಗ್ರಾಮದಲ್ಲಿ, ನೆಂಟರ ಮನೆಯಲ್ಲಿ ಹುಡುಕಿದ್ದಾರೆ. ಪುಟ್ಟರಂಗಮ್ಮ ಎಲ್ಲೂ ಸಿಗದ ಕಾರಣ ತಡವಾಗಿ ಅಂದರೆ ಫೆ.24 ರಂದು ಕುಟುಂಬಸ್ಥರು ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾಣೆಯಾದವರ ಚಹರೆ ಇಂತಿದೆ.
ಹೆಸರು:ಪುಟ್ಟರಂಗಮ್ಮ, ವಯಸ್ಸು:45 ವರ್ಷ, ಸಾಧಾರಣ ಮೈಕಟ್ಟು ,ಎಣ್ಣೆಗೆಂಪು ಬಣ್ಣ. 4.5 ಅಡಿ ಎತ್ತರ. ಭಾಷೆ: ಕನ್ನಡ ಮಾತನಾಡುತ್ತಾರೆ. ಮನೆಯಿಂದ ತೆರಳುವಾಗ ಕೆಂಪು ಸೀರೆ ಮತ್ತು ಬಿಳಿ ಬಣ್ಣದ ರವಿಕೆ ಧರಿಸಿದ್ದಾರೆ. ಇವರು ಎಲ್ಲಾದರೂ ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬಹುದಾಗಿದೆ. ಅಥವಾ ಮೊ.ಸಂ. 9535523906, 7026423637 ಸಂಪರ್ಕಿಸಬಹುದಾಗಿದೆ. (ಕೆ.ಎಸ್,ಎಸ್.ಎಚ್)