ಮೈಸೂರು

ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರ ಹುಟ್ಟು ಹಬ್ಬ ಆಚರಣೆ

ಮೈಸೂರು,ಫೆ.27:- ಯಡಿಯೂರಪ್ಪನವರ  78ನೇ ವರ್ಷದ ಹುಟ್ಟು ಹಬ್ಬವನ್ನಿಂದು ಮೈಸೂರು ನಗರ ಬಿಜೆಪಿ ಕಛೇರಿಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.

ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ  ಹಾಗೂ ರೈತ ನಾಯಕರು ಆದ   ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ  ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇವೆ. ಅವರಿಗೆ ತಾಯಿ ಚಾಮುಂಡೇಶ್ವರಿ ಆಯಸ್ಸು,ಆರೋಗ್ಯ ಯಶಸ್ಸು  ಕರುಣಿಸಲಿ ಎಂದು ಪ್ರಾರ್ಥಿಸಿ ಸಾರ್ವಜನಿಕರಿಗೆ ಸಿಹಿ ಹಂಚುವ ಮುಖಾಂತರ ಮೈಸೂರು ನಗರ ಬಿಜೆಪಿ ಕಛೇರಿಯಲ್ಲಿ ಹುಟ್ಟು ಹಬ್ಬವನ್ನು  ಆಚರಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ  ಪ್ರದೀಪ್ ಕುಮಾರ್, ಸೋಮಸುಂದರ,ರಮೇಶ್,ಗೋಕುಲ್ ಗೋವರ್ಧನ್, ಜೋಗಿಮಂಜು,ರಾಜೇಶ್, ಜೈಶಂಕರ್, ಜಗದೀಶ್, ಸಂತೋಷ್, ಜಯಪ್ಪ,ನಂದಕುಮಾರ್ ಮುಂತಾದವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: