ಮೈಸೂರು

ನೂರೊಂದು ಗಣಪತಿ ದೇವಸ್ಥಾನದಲ್ಲಿ ಯಡಿಯೂರಪ್ಪನವರ ಹೆಸರಿನಲ್ಲಿ ವಿಶೇಷ ಪೂಜೆ

ಮೈಸೂರು,ಫೆ.27:- ಬಿ.ಎಸ್ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ,ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನ ಅಗ್ರಹಾರದಲ್ಲಿರುವ   ನೂರೊಂದು ಗಣಪತಿ ದೇವಸ್ಥಾನದಲ್ಲಿ ಯಡಿಯೂರಪ್ಪನವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಆನಂದ್ ಮಾತನಾಡಿ ಬಿ.ಎಸ್ ಯಡಿಯೂರಪ್ಪನವರು ಜನನಾಯಕ ಜನರಿಂದ ಜನರಿಗೋಸ್ಕರ ಬದುಕುತ್ತಿದ್ದಾರೆ. ಬಿ.ಎಸ್ ಯಡಿಯೂರಪ್ಪನವರು ಯಾವತ್ತೂ ಮುಖ್ಯಮಂತ್ರಿ ಆಗಬೇಕೆಂದು ಬಯಸಿದವರಲ್ಲ.  ಅವರಲ್ಲಿ ಇರುವ  ನಿಸ್ವಾರ್ಥ ಸೇವೆ ಪರಿಗಣಿಸಿ  ಜನರೇ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ,  ಯಡಿಯೂರಪ್ಪನವರು ನೂರು ವರ್ಷ ಸುಖ ಸಂತೋಷದಿಂದ ಬಾಳಲಿ. ನಾಡಿನ ಜನರಿಗೆ ಇನ್ನೂ ಹೆಚ್ಚಿನದಾಗಿ ಸೇವೆ ಮಾಡಲು ಭಗವಂತನು ಇನ್ನೂ ಹೆಚ್ಚಿನದಾಗಿ ಶಕ್ತಿ ನೀಡಲಿ ಎಂದು ಹಾರೈಸಿದರು.  ಕಷ್ಟಗಳನ್ನು ಮೆಟ್ಟಿ ನಿಂತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಜನರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿ ಬಿಎಸ್ ಯಡಿಯೂರಪ್ಪನವರು. ಇಂದು ಎಪ್ಪತ್ತೆಂಟನೇ ವಸಂತಕ್ಕೆ ಕಾಲಿಡುತ್ತಿದ್ದು ಅವರಿಗೆ ಮಂಗಳವಾಗಲಿ ಎಂದು ಹರಸಿದರು.

ಬಿಎಸ್ ಯಡಿಯೂರಪ್ಪ ಅಭಿಮಾನಿ ಬಳಗದ ಅಧ್ಯಕ್ಷರಾದ ಮಧು ಎನ್ ಪೂಜಾರ್ ಮಾತನಾಡಿ ಬಿಎಸ್ ಯಡಿಯೂರಪ್ಪನವರು ಕರ್ನಾಟಕ ಕಂಡಂತಹ ಅದ್ಭುತ ನಾಯಕ  78 ನೇ ವಸಂತಕ್ಕೆ ಕಾಲಿಡುತ್ತಿರುವ ನಮ್ಮ ನಾಯಕರಿಗೆ ಶುಭವಾಗಲಿ ಹಾರೈಸಿದರು.

ಈ ಸಂದರ್ಭ  ಯುವ ನಾಯಕರಾದ ವಿಕ್ರಮ ಅಯ್ಯಂಗಾರ್, ಬಿಜೆಪಿ ಮುಖಂಡರಾದ ಲೋಹಿತ್,ಸುಚೀಂದ್ರ , ಚಕ್ರಪಾಣಿ,ಪ್ರಶಾಂತ್ , ಶಿವಪ್ರಕಾಶ್, ಜಯಪ್ಪ, ಕಡಕೊಳ ಜಗದೀಶ್,ಜೀವನ್  ಸೇರಿದಂತೆ ಅಭಿಮಾನಿ ಬಳಗದವರು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: