ಮನರಂಜನೆ

ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಾಲಿವುಡ್ ನ ಕೊಂಕಣ ಸೇನ್ ಶರ್ಮಾ- ರಣವೀರ್ ಶೌರಿ

ದೇಶ(ನವದೆಹಲಿ)ಫೆ.27:- ಬಾಲಿವುಡ್ ಖ್ಯಾತನಾಮರಾದ ಕೊಂಕಣ ಸೇನ್ ಶರ್ಮಾ ಮತ್ತು ರಣವೀರ್ ಶೌರಿ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ದಂಪತಿಗಳು 5 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಕಳೆದ ವರ್ಷ ‘ತಿತಲಿ’ ಚಿತ್ರದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ರಣವೀರ್ ಶೋರೆ ಅವರು ಬೇರೆಯಾಗಿರುವ ಕುರಿತು ಒಪ್ಪಿಕೊಂಡಿದ್ದರು.  ಅವರ ಅಭಿಮಾನಿಗಳು ಅವರನ್ನು ವಿಭಿನ್ನವಾಗಿ ಇಷ್ಟಪಡುವುದಿಲ್ಲ.

ವರದಿಯೊಂದರ ಮಾಹಿತಿಯಂತೆ ತಾನು ಮತ್ತು ಕೊಂಕಣ್ ಸೇನ್  ಮುಂದೆ ಸಂಬಂಧದಲ್ಲಿಲ್ಲ ಎಂದು ರಣವೀರ್ ಶೌರಿ ಮಾಧ್ಯಮಗಳಿಗೆ ತಿಳಿಸಿದ್ದಾರೆನ್ನಲಾಗಿದೆ.  ಕೊಂಕಣಣ್ ರಿಂದ ಬೇರ್ಪಟ್ಟಿದ್ದಕ್ಕಾಗಿ ಅವರು ತನ್ನನ್ನು ತಾನು ದೂಷಿಸಿಕೊಂಡಿದ್ದು, ಪರಸ್ಪರ ಒಪ್ಪಿಗೆಯಿಂದ ಬೇರ್ಪಡಲು ಇಬ್ಬರೂ ನಿರ್ಧರಿಸಿದ್ದಾರೆ. ವಿಚ್ಛೇದನಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನೂ ದಾಖಲಿಸಲಾಗಿದೆ. ಇಬ್ಬರೂ ಬೇರ್ಪಟ್ಟಿದ್ದರೂ, ನ್ಯಾಯಾಲಯದ ಆದೇಶದ ನಂತರ, ಅವರಿಬ್ಬರೂ ಅಧಿಕೃತವಾಗಿ ಪ್ರತ್ಯೇಕಗೊಳ್ಳಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ, ಕೊಂಕಣ ಮತ್ತು ರಣವೀರ್ ಅವರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದಾಗ  ಇಬ್ಬರಿಗೂ ಕೌನ್ಸಲಿಂಗ್ ಮಾಡಲಾಯಿತು. ಆದರೆ ಅಂತಿಮವಾಗಿ ಇಬ್ಬರೂ ಪ್ರತ್ಯೇಕವಾಗಿರಲು ನಿರ್ಧರಿಸಿದರು.   6 ವರ್ಷದ ಮಗನೂ ಇದ್ದು, ಮಗುವಿನ ಪಾಲನೆಗಾಗಿ ಇಬ್ಬರೂ ಜಂಟಿ ಕಸ್ಟಡಿ ಆಯ್ಕೆ ಮಾಡಿಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಮಗನನ್ನು ಮೊದಲಿನಿಂದಲೂ ನೋಡಿಕೊಳ್ಳುತ್ತಿದ್ದಾರೆ.

ಕೊಂಕಣ ಸೇನ್ ಶರ್ಮಾ ಮತ್ತು ರಣವೀರ್ 2010 ರಲ್ಲಿ ವಿವಾಹವಾದರು.  ಒಟ್ಟಿಗೆ ಅವರು ಟ್ರಾಫಿಕ್ ಸಿಗ್ನಲ್, ಮಿಕ್ಸ್ಡ್ ಡಬಲ್ಸ್, ಆಜಾ ನಾಚ್ಲೆ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು. ಕೊಂಕಣ ಮದುವೆಗೆ ಮೊದಲು ಗರ್ಭಿಣಿಯಾಗಿದ್ದರು. ಇಬ್ಬರ ಸಂಬಂಧ, ಮದುವೆ, ಪ್ರೆಗ್ನೆನ್ಸಿ ಸಾಕಷ್ಟು ಸುದ್ದಿ ಮಾಡಿತ್ತು.  ಈ ಸುಂದರ ದಂಪತಿಗಳು ವಿಚ್ಛೇದನ ಪಡೆಯುತ್ತಿರುವುದು ಅಭಿಮಾನಿಗಳಿಗೆ ನೋವುಂಟು ಮಾಡಿದೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: