ದೇಶಪ್ರಮುಖ ಸುದ್ದಿ

ಜಾಮಿಯಾ ವಿಶ್ವವಿದ್ಯಾಲಯ ಗಲಭೆ ಪ್ರಕರಣ: ದೆಹಲಿ ಸರ್ಕಾರ, ಪೊಲೀಸರಿಗೆ ನೋಟಿಸ್ ನೀಡಿದ ದೆಹಲಿ ಹೈ ಕೋರ್ಟ್

ನವದೆಹಲಿ,ಫೆ.27-ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಹಾಗೂ ಪೊಲೀಸರಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ವಿದ್ಯಾರ್ಥಿ ಮಹಮದ್ ಮುಸ್ತಫಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ವಿದ್ಯಾರ್ಥಿಗಳ ಮೇಲೆ ಹಲ್ಲೆ ಪೊಲೀಸರು ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಪರಿಹಾರವಾಗಿ 1 ಕೋಟಿ ರೂ. ನೀಡಬೇಕು ಎಂದು ಮಹಮದ್ ಮುಸ್ತಫಾ ಅರ್ಜಿಯಲ್ಲಿ ಕೋರಿದ್ದಾರೆ.

2019ರ ಡಿಸೆಂಬರ್ 15ರಂದು ಘಟನೆ ನಡೆದಿದ್ದು, ಪ್ರತಿಭಟನೆ ವೇಳೆ ಹಲವು ವಾಹನಗಳು ಬೆಂಕಿಗೆ ಅಹುತಿಯಾಗಿದ್ದವು. ಕೆಲ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: