ಕ್ರೀಡೆಮೈಸೂರು

ಅಂತರ ವಿಶ್ವವಿದ್ಯಾಲಯ ಕಿಕ್ ಬಾಕ್ಸಿಂಗ್ ಪುರುಷರ ಪಂದ್ಯಾವಳಿ : ಸುಹಾಸ್ ಗೆ ಬೆಳ್ಳಿ-ಕಂಚಿನ ಪದಕ

ಮೈಸೂರು,ಫೆ.28:- ಇತ್ತೀಚೆಗೆ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕಿಕ್ ಬಾಕ್ಸಿಂಗ್ ಪುರುಷರ ಪಂದ್ಯಾವಳಿ 2019-20 ಯಲ್ಲಿ ಸುಹಾಸ್ ಇವರು ಕಂಚಿನ ಪದಕ ಹಾಗೂ ವಾಕೊ ಇಂಡಿಯ ಒಪನ್ ಅಂತರರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಬೆಳ್ಳಿಯ ಪದಕ,ಮತ್ತು ಕಂಚಿನ ಪದಕ ಗಳಿಸಿದ್ದು ಮೈಸೂರು ವಿವಿಗೆ  ಹೆಮ್ಮೆ ತಂದುಕೊಟ್ಟಿದ್ದಾರೆ.

ಫೆ.14 ರಿಂದ 18 ವರೆಗೆ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾಲಯ ಜಾನ್ ಪುರ್ ಉತ್ತರ್ ಪ್ರದೇಶದಲ್ಲಿ ನಡೆದ ಲೋ ಕಿಕ್ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಫೆ.9 ರಿಂದ 13 ವರಗೆ ತಾಲ್ ಕೋಟ್ರ ಒಳಾಂಗಣ ದೆಹಲಿಯಲ್ಲಿ ನಡೆದ ವಾಕೋ ಇಂಡಿಯನ್ ಓಪನ್ ಅಂತರರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಬೆಳ್ಳಿಯ ಪದಕ,ಕಂಚಿನ ಪದಕ ಎರಡು ಪದಕ ಗಳಿಸಿದ್ದು, ಈ ಗೆಲುವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಸುಹಾಸ್ ತಮ್ಮ ಗೆಲುವಿನ ಸಂತಸ ಹಂಚಿಕೊಂಡಿದ್ದಾರೆ.

ಇವರನ್ನು ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ತರಬೇತುದಾರ ಜಶ್ವಂತ್ ಅಭಿನಂದಿಸಿದ್ದಾರೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: