ಮೈಸೂರು

ಆನ್ ಲೈನ್ ವ್ಯಾಪಾರವನ್ನು ವಿರೋಧಿಸಿ ವಿತರಕರ ಸಂಘದಿಂದ ಪ್ರತಿಭಟನೆ

ಮೈಸೂರು,ಫೆ.28:-  ಆನ್ ಲೈನ್ ವ್ಯಾಪಾರವನ್ನು ವಿರೋಧಿಸಿ ಮೈಸೂರು ಜಿಲ್ಲಾ ವಿತರಕರ ಸಂಘದಿಂದ ಪ್ರತಿಭಟನೆ ನಡೆಯಿತು.

ಇಂದು ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು  ಆನ್ ಲೈನ್ ವ್ಯಾಪಾರವನ್ನು ವಿರೋಧಿಸಿದರು.  ಆನ್ಲೈನ್ ವ್ಯಾಪಾರವನ್ನು ಕೂಡಲೇ ನಿಲ್ಲಿಸಬೇಕು. ಬಂಡವಾಳ ಶಾಹಿ ಕಂಪನಿಗಳು ಆನ್ ಲೈನ್ ಮೂಲಕ ಆಸೆ ಆಮಿಷಗಳನ್ನು ಒಡ್ಡುತ್ತಿವೆ‌. ಇದರಿಂದ ಸ್ಥಳೀಯ ವ್ಯಾಪಾರಸ್ಥರಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ವ್ಯಾಪಾರವನ್ನು ನಂಬಿ ಬದುಕುವ ಸಾಕಷ್ಟು ಜನರು ಇದರಿಂದ ತೊಂದರೆ  ಒಳಗಾಗಲಿದ್ದಾರೆ.‌ ಸರ್ಕಾರ ಈ ಕೂಡಲೆ ಆನ್ ಲೈನ್ ವ್ಯಾಪಾರಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಒಂದು ದೇಶ ಒಂದು ತೆರಿಗೆ ಎಂಬಂತೆ ದೇಶ ಒಂದೇ ಬೆಲೆ ನೀತಿ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ಆನ್ ಲೈನ್ ಕಂಪನಿಗಳ ಅಸಂಬದ್ಧ ರಿಯಾಯಿತಿಗಳನ್ನು ತಡೆಯಲು ನಿಯಮ ರೂಪಿಸಬೇಕು. ವ್ಯಾಪಾರಸ್ಥರ ಹಿತ ಕಾಪಾಡಲು ಸರ್ಕಾರದ ವತಿಯಿಂದ ನಿಗಮ ಮಂಡಳಿಗಳನ್ನು ಅಸ್ತಿತ್ವಕ್ಕೆ ತರಬೇಕು. ಹೊಸ ಕಂಪನಿಗಳಿಗೆ ಬಿ-ಬಿ ವ್ಯಾಪಾರಕ್ಕೆ ಅನುಮತಿ ನೀಡಬಾರದೆಂದು ಒತ್ತಾಯಿಸಿದರು.

ಮೈಸೂರು ಜಿಲ್ಲಾ ವಿತರಕರ ಸಂಘ ,ಕೆ . ಎಫ್ . ಡಿ . ಡಬ್ಲೂ ಎ ಹಾಗೂ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇವರುಗಳ ಸಹಯೋಗದೊಂದಿಗೆ ಮೈಸೂರು ಸೂಪರ್ ಮಾರ್ಕೆಟ್ಸ್ , ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧಿ ಮಾರಾಟಗಾರರ ಸಂಘ,  ಮೈಸೂರು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: