ಮೈಸೂರು

“ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವುದು ಹೇಗೆ” ಕಾರ್ಯಾಗಾರಕ್ಕೆ ಚಾಲನೆ

ಮೈಸೂರು,ಫೆ.28:-   ಭಾರತೀಯ ವಿದ್ಯಾರ್ಥಿ ಸಂಘ(BVS) ವತಿಯಿಂದ ಜಿಲ್ಲಾ ಸಂಯೋಕರಾದ   ಸೋಸಲೆ ಸಿದ್ದರಾಜು ಅವರ‌ ನೇತೃತ್ವದಲ್ಲಿ  ನಗರದ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ“ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವುದು ಹೇಗೆ” ಎನ್ನುವ ವಿಚಾರದಲ್ಲಿ  ನಡೆಯುತ್ತಿರುವ ಕಾರ್ಯಾಗಾರಕ್ಕಿಂದು ಚಾಲನೆ ನೀಡಲಾಯಿತು.

IAS, KAS, PSI, FDA, SDA ಪರೀಕ್ಷೆಗಳಿಗೆ ಸಿದ್ಧರಾಗುವುದು ಹೇಗೆ ಎಂದು ಕಾರ್ಯಾಗಾರದಲ್ಲಿ ತಜ್ಞರು ಮಾಹಿತಿ ನೀಡಿದರು. ಈ ಕಾರ್ಯಾಗಾರವನ್ನು  ಐಎಫ್ ಎಸ್ ಅಧಿಕಾರಿಗಳಾದ   ಪದ್ಮನಾಭ ಹೆಚ್.ಎಸ್.   ಉದ್ಘಾಟಿಸಿದರು.  ದೆಹಲಿ, ಹೈದರಾಬಾದ್ ಮತ್ತು ಬೆಂಗಳೂರು ಐಎಎಸ್ ತರಬೇತುದಾರ ಡಾ.ಶಿವಕುಮಾರ   ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅಕ್ಕ ಐಎಎಸ್ ಅಕಾಡಮಿಯ ದೆಹಲಿ ಹಾಗೂ ಬೆಂಗಳೂರು ತರಬೇತುದಾರರಾದ ವಾಜೀರಾವ್   ಮತ್ತು ರವಿ ,  ಮೈಸೂರು ವಿಂಗ್ ಕೋಚಿಂಗ್ ಸೆಂಟರ್ ನ ಸಂದೀಪ್ ಎಸ್.ರಾವಣೀಕರ್, ಬಿವಿಎಸ್ ಮೈಸೂರು ಜಿಲ್ಲಾ ಸಂಯೋಜಕರಾದ ಗಣೇಶ್ ಮೂರ್ತಿ ಹೆಚ್.ಎಸ್.   ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: