ಮನರಂಜನೆ

ಸ್ತ್ರೀರೋಗ ತಜ್ಞರಾಗಿ ಕಾಣಿಸಿಕೊಳ್ಳಲಿದ್ದಾರಂತೆ ಬಾಲಿವುಡ್ ಸೂಪರ್ಸ್ಟಾರ್ ಆಯುಷ್ಮಾನ್ ಖುರಾನಾ !

ದೇಶ(ನವದೆಹಲಿ)ಫೆ.28:-  ಬಾಲಿವುಡ್ ಸೂಪರ್‌ಸ್ಟಾರ್ ಆಯುಷ್ಮಾನ್ ಖುರಾನಾ ಈ ದಿನಗಳಲ್ಲಿ ತಮ್ಮ ‘ಶುಭ್ ಮಂಗಲ್ ಸಾವಧಾನ್’   ಚಿತ್ರದ ಯಶಸ್ಸನ್ನು ಆಚರಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಆಯುಷ್ಮಾನ್ ಸಲಿಂಗಕಾಮಿ ಹುಡುಗನ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಕ್ಕೂ ಮೊದಲು ಅವರು ವೀರ್ಯ ದಾನಿ, ಕುರುಡು ಸಂಗೀತಗಾರ, ಲೇಡಿ ಕಾಲರ್ ಸೇರಿದಂತೆ ವಿವಿಧ  ರೂಪದಲ್ಲಿ ಜನರ ಹೃದಯವನ್ನು ಗೆದ್ದಿದ್ದಾರೆ. ಅದೇ ವೇಳೆ  ಆಯುಷ್ಮಾನ್ ಖುರಾನಾ ಮತ್ತೊಂದು ರೀತಿಯ ಪಾತ್ರವನ್ನು ಮಾಡಲು ಸಿದ್ಧವಾಗಿದ್ದಾರೆಂಬ ವದಂತಿ ಹರಡಿದ್ದು,   ಅವರು ಗೈನಾಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಸುದ್ದಿಸಂಸ್ಥೆಯೊಂದರ ವರದಿಯ ಪ್ರಕಾರ  ಆಯುಷ್ಮಾನ್ ಖುರಾನಾ ಮುಂದಿನ ಯೋಜನೆಗೆ ಸಹಿ ಹಾಕಿದ್ದಾರಂತೆ. ಅವರ ಮುಂದಿನ ಚಿತ್ರದಲ್ಲಿ ಸ್ತ್ರೀರೋಗತಜ್ಞರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದ ಕಥೆ ಸ್ತ್ರೀರೋಗ ವಿಭಾಗದ ಶೀರ್ಷಿಕೆ ಹೊಂದಿರಲಿದ್ದು, ಸಾಮಾಜಿಕ ಕಳಕಳಿಯ ಜೊತೆ  ಹಾಸ್ಯಮಯವಾಗಿರಲಿದೆಯಂತೆ.  ಚಿತ್ರದಲ್ಲಿ ನಟಿ ಅಲಾಯಾ ಫರ್ನಿಚರ್ವಾಲಾ ಕಾಣಿಸಿಕೊಳ್ಳಲಿದ್ದಾರೆನ್ನಲಾಗಿದೆ. ‘ಜವಾನಿ ಜಾನೆಮನ್’ ಚಿತ್ರದ ಮೂಲದ ಚಿತ್ರರಂಗ ಪ್ರವೇಶಿಸಿದ್ದರು.

ಸುದ್ದಿ ಪ್ರಕಾರ ಅನುಭೂತಿ ಕಶ್ಯಪ್  ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ.

ನಟ ಆಯುಷ್ಮಾನ್ ಕುರಾನ್ ಅಭಿನಯದ  ‘ಶುಭ್ ಮಂಗಲ್ ಸಾವಧಾನ್’   ಚಿತ್ರಕ್ಕೆ ಅಮೇರಿಕದ ಅಧ್ಯಕ್ಷ ಟ್ರಂಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: