ಮನರಂಜನೆ

ಸಿನಿಮಾಗಾಗಿ 30 ಕೆಜಿ ತೂಕ ಇಳಿಸಿದ ರಾಣಾ ದಗ್ಗುಬಾಟಿ

ಹೈದರಾಬಾದ್,ಫೆ.28-ನಟ ರಾಣಾ ದಗ್ಗುಬಾಟಿ ಸಿನಿಮಾವೊಂದಕ್ಕಾಗಿ ಬರೋಬ್ಬರೀ 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

‘ಬಾಹುಬಲಿ’ ಚಿತ್ರದಲ್ಲಿ ಬಲ್ಲಾಳದೇವನಾಗಿ ಅಬ್ಬರಿಸಿದ್ದ ರಾಣಾ ದಗ್ಗುಬಾಟಿ ಇದೀಗ ಪಾತ್ರಕ್ಕೆ ಅನುಗುಣವಾಗಿ ಕಠಿಣ ಡಯೆಟ್ ಅನುಸರಿಸಿ 30 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

ನಿರ್ದೇಶಕ ಪ್ರಭು ಸೋಲೋಮನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ. ಸಿನಿಮಾ ಹಿಂದಿಯಲ್ಲಿ ‘ಹಾಥಿ ಮೇರೆ ಸಾಥಿ’, ತೆಲುಗಿನಲ್ಲಿ ‘ಅರಣ್ಯ’ ಮತ್ತು ತಮಿಳಿನಲ್ಲಿ ‘ಕಾಡನ್’ ಆಗಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ರಾಣಾ ದಟ್ಟ ಅರಣ್ಯದಲ್ಲಿ ವಾಸಿಸುವ ಬಂದೇವ್ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಎಲ್ಲವೂ ನೈಜವಾಗಿ ಮೂಡಿಬರಬೇಕು ಎಂಬುದು ನಿರ್ದೇಶಕ ಪ್ರಭು ಸೋಲೋಮನ್ ಇಚ್ಛೆ ಆಗಿತ್ತು. ಸದಾ ಕಟ್ಟುಮಸ್ತಾದ ದೇಹ ಹೊಂದಿದ್ದ ನನಗೆ ತೂಕ ಕಳೆದುಕೊಳ್ಳಲು ತುಂಬಾ ಕಷ್ಟ ಆಯ್ತು. ಬಂದೇವ್ ಪಾತ್ರದ ಲುಕ್ ಗಾಗಿ ಅತ್ಯಂತ ಕಠಿಣ ಫಿಸಿಕಲ್ ಟ್ರೈನಿಂಗ್ ಪಡೆದುಕೊಳ್ಳಬೇಕಾಯಿತು. ಇದರಿಂದ ನನಗೆ ಒಳ್ಳೆಯ ಅನುಭವ ಲಭಿಸಿತು ಎನ್ನುತ್ತಾರೆ ರಾಣಾ ದಗ್ಗುಬಾಟಿ.

ಮಾನವ ಮತ್ತು ಆನೆಗಳ ನಡುವಿನ ಸಂಬಂಧದ ಕಥೆ ಹೊಂದಿರುವ ಏಪ್ರಿಲ್ 2 ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. (ಎಂ.ಎನ್)

 

Leave a Reply

comments

Related Articles

error: