ಮನರಂಜನೆ

ಶೀಘ್ರದಲ್ಲೇ ವಿವಾಹವಾಗಲಿದ್ದಾರಂತೆ ಬಾಲಿವುಡ್ ತಾರೆಯರಾದ ಕೃತಿ ಖರಬಂದ – ಪುಲ್ಕಿತ್  ಸಾಮ್ರಾಟ್ ?

ದೇಶ(ನವದೆಹಲಿ)ಫೆ.28:-  ಬಾಲಿವುಡ್ ತಾರೆಯರಾದ ಕೃತಿ  ಖರಬಂದ ಮತ್ತು ಪುಲ್ಕಿತ್ ಸಾಮ್ರಾಟ್ ಅವರ ನಡುವೆ ಸಂಬಂಧವಿರುವುದನ್ನು ಇಬ್ಬರೂ ಇತ್ತೀಚೆಗೆ   ಒಪ್ಪಿಕೊಂಡಿದ್ದಾರೆ.  ಈಗ ವಿಷಯವು ಅವರ ಮದುವೆಯವರೆಗೆ ತಲುಪಿದೆ. ಮಾಧ್ಯಮ ವರದಿಗಳ ಪ್ರಕಾರ  ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ.

ಕೃತಿ ಶೀಘ್ರದಲ್ಲೇ ಪುಲ್ಕಿತ್ ಅವರ ಕುಟುಂಬವನ್ನು ಭೇಟಿಯಾಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು,   ಪುಲ್ಕಿತ್ ಅವರ ಸೋದರ ಸಂಬಂಧಿ   ಉಲ್ಲಾಸ್ ಚಕ್ರವರ್ತಿಯ ವಿವಾಹವಿದೆ. ಇದಕ್ಕೆ ಕೃತಿ ಖರಬಂದ ಅವರನ್ನು ಸಹ ಆಹ್ವಾನಿಸಲಾಗಿದೆ. ಕೃತಿ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆನ್ನಲಾಗಿದೆ.

ಉಲ್ಲಾಸ್ ಸಾಮ್ರಾಟ್ ಅವರ ಮದುವೆ ದೆಹಲಿಯಲ್ಲಿ ನಡೆಯಲಿದೆ. ಕೃತಿ ಪುಲ್ಕಿತ್ ಸಾಮ್ರಾಟ್ ಅವರೊಂದಿಗೆ ಇಲ್ಲಿಗೆ ಬರಲಿದ್ದಾರೆ. ಇತ್ತೀಚೆಗೆ  ಉಲ್ಲಾಸ್ ಗೋವಾದಲ್ಲಿ ತಮ್ಮ ಬ್ಯಾಚುಲರ್ ಪಾರ್ಟಿಯನ್ನು ಆಯೋಜಿಸಿದ್ದರು, ಅದರಲ್ಲಿ ಕೃತಿ ಪಾಲ್ಗೊಂಡಿದ್ದರು.

ಕೃತಿ ಖರಬಂದ ಕುಟುಂಬದ ಬಗ್ಗೆ ತಿಳಿದುಕೊಂಡ ಪುಲ್ಕಿತ್ ಸಾಮ್ರಾಟ್ ಅವರ ಕುಟುಂಬ  ತುಂಬಾ ಸಂತೋಷಗೊಂಡಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಉಲ್ಲಾಸ್ ಸಾಮ್ರಾಟ್ ಅವರ ವಿವಾಹದ ಆರತಕ್ಷತೆಯಲ್ಲಿ ಇಬ್ಬರ ಮದುವೆ ಕುರಿತು ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯಿದೆ.   ‘ಪಾಗಲ್ಪಂತಿ’ ಚಿತ್ರದ ಸೆಟ್ ನಲ್ಲಿ ಪುಲ್ಕಿತ್ ಮತ್ತು ಕೃತಿ ಭೇಟಿಯಾಗಿದ್ದು, ಅಂದಿನಿಂದ ಇಬ್ಬರ ನಡುವೆ ಆಳವಾದ ಸ್ನೇಹವಿದೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: