ಕ್ರೀಡೆ

ಎರಡನೇ ಟೆಸ್ಟ್ ಆಡಲು ಪೃಥ್ವಿ ಶಾ ಫಿಟ್ : ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿಕೆ

ವಿದೇಶ( ಕ್ರೈಸ್ಟ್‌ಚರ್ಚ್)ಫೆ.28:-  ಎರಡನೇ ಟೆಸ್ಟ್ ಆಡಲು ಆರಂಭಿಕ ಆಟಗಾರ ಪೃಥ್ವಿ ಶಾ ಸಂಪೂರ್ಣ ಫಿಟ್ ಆಗಿದ್ದಾರೆ ಮತ್ತು ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಲು ಸಿದ್ಧರಾಗಿದ್ದಾರೆ ಎಂದು ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಶುಕ್ರವಾರ ಬಹಿರಂಗಪಡಿಸಿದ್ದಾರೆ.

ಮೊದಲ ಟೆಸ್ಟ್ ಸೋಲಿನ ಹೊರತಾಗಿಯೂ, ಶನಿವಾರದಿಂದ ಪ್ರಾರಂಭವಾಗುವ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣವಾಗಿ ಹೊಂದಿಕೊಳ್ಳಲಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಸೋಲಿನ ನಂತರ, ಪೃಥ್ವಿ ಶಾ ಮತ್ತು ರವಿಚಂದ್ರನ್ ಅಶ್ವಿನ್ ಎರಡನೇ ಟೆಸ್ಟ್‌ನಲ್ಲಿ ಪ್ಲೇಯಿಂಗ್ ಇಲೆವನ್ ಸ್ಥಾನಕ್ಕೆ ಬರುವುದಿಲ್ಲ ಎಂಬ ಆತಂಕವಿತ್ತು. ಇದರ ನಂತರ ನಾಯಕ ವಿರಾಟ್ ಕೊಹ್ಲಿ   ಪೃಥ್ವಿ ಶಾ ಅವರ ಸಾಮರ್ಥ್ಯದ ಬಗ್ಗೆ ನಂಬಿಕೆಯಿದ್ದು  ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಹೇಳಿದ್ದರು.

ಪೃಥ್ವಿ ಶಾ ಅವರ ಎಡಗಾಲಿನಲ್ಲಿನ ಗಾಯದಿಂದಾಗಿ ಅಭ್ಯಾಸಕ್ಕಾಗಿ ಮೈದಾನಕ್ಕಿಳಿಯದಿದ್ದಾಗ ನಾಟಕೀಯ ತಿರುವು ಪಡೆದುಕೊಂಡಿತು. ಈ ಕಾರಣದಿಂದಾಗಿ, ಈ ಪಂದ್ಯದಲ್ಲಿ ಅವರು ಆಡುವುದು ಅನುಮಾನಾಸ್ಪದವೆಂದು ಹೇಳಲಾಯಿತು. ಪೃಥ್ವಿ ಶಾ ಆಡದಿದ್ದರೆ, ಶುಬ್ಮನ್ ಗಿಲ್ ಟೆಸ್ಟ್ ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಗುಲಿದೆ ಎನ್ನಲಾಗುತ್ತಿದೆ.

ಪೃಥ್ವಿ ಶಾ ಫಿಟ್ ಆಗಿದ್ದು, ಎರಡನೇ ಟೆಸ್ಟ್ನಲ್ಲಿ ಆಡಲು ಸಿದ್ಧ ಎಂದು ರವಿಶಾಸ್ತ್ರಿ ಹೇಳಿದಾಗ ಊಹಾಪೋಹಗಳಿಗೆ ತೆರೆ ಬಿದ್ದಿದೆ.   ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂದು ಕೇಳಿದಾಗ, ಪಂದ್ಯದ ಮೊದಲು ಬೆಳಿಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ರವಿಚಂದ್ರನ್ ಅಶ್ವಿನ್ ಅವರ ಬ್ಯಾಟಿಂಗ್ ಸುಧಾರಣೆಗೆ ಅವಕಾಶವಿದೆ.

ಅಶ್ವಿನ್ ಅವರ ಬ್ಯಾಟಿಂಗ್ ಸರಾಸರಿ ಕಳೆದ ಎರಡು ವರ್ಷಗಳಲ್ಲಿ ತೀವ್ರವಾಗಿ ಕುಸಿದಿದೆ. ಅವರ ಬೌಲಿಂಗ್ ಪ್ರದರ್ಶನ ಕುಸಿದಿದೆ.  ಅಶ್ವಿನ್ ವಿಶ್ವ ದರ್ಜೆಯ ಬೌಲರ್. ಆದರೆ ಸರಿಯಾದ ಸಂದರ್ಭಗಳಿಗೆ ಅನುಗುಣವಾಗಿ ಸರಿಯಾದ ಆಯ್ಕೆ ಮಾಡಲು ನಾವು ಬಯಸುತ್ತೇವೆ. ಅವರು ತಮ್ಮ ಬ್ಯಾಟಿಂಗ್ ಅನ್ನು ಸುಧಾರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಈ ವರ್ಷ ಆದ್ಯತೆಯ ಟೆಸ್ಟ್ ಮತ್ತು ಟಿ 20 ಸ್ವರೂಪವಾಗಿದ್ದು, ಒಂದು ಟೆಸ್ಟ್ ಸೋಲಿನ ಬಗ್ಗೆ ತಂಡದ ಆಡಳಿತವು ಹೆಚ್ಚು ಚಿಂತಿಸುತ್ತಿಲ್ಲ ಎಂದು ಅವರು ಹೇಳಿದರು. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: