ಮೈಸೂರು

ಶೃಂಗೇರಿ ಶ್ರೀಗಳ ಆಶೀರ್ವಾದ ಪಡೆದ ಯಡಿಯೂರಪ್ಪ

ನ೦ಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ  ಮೈಸೂರಿನ ನಟರಾಜ ಕಾಲೇಜು ಬಳಿ ಇರುವ ಶಂಕರ ಮಠಕ್ಕೆ ತೆರಳಿ ಶೃಂಗೇರಿ ಮಠದ ಭಾರತೀ ತೀರ್ಥ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಪಕ್ಷದ ಅನೇಕ ನಾಯಕರೊ೦ದಿಗೆ ಹರದನಹಳ್ಳಿ, ನೆಲ್ಲಿತಾಳಪುರ ಮತ್ತು ಹುಲ್ಲಹಳ್ಳಿ, ಶಿರಮಳ್ಳಿ ಗ್ರಾಮ ಪಂಚಾಯಿತಿ ಮೊದಲಾದ ಗ್ರಾಮಗಳಲ್ಲಿ ಚುನಾವಣಾ ಸಭೆಗಳನ್ನು ನಡೆಸಿದರು.  ಈ ಸಂದರ್ಭ ಅವರ ಅಭಿಮಾನಿಗಳು, ಬೆಂಬಲಿಗರು ಗುಲಾಬಿ ಹೂವಿನ ಹಾರ ಹಾಕಿ ಪ್ರೀತ್ಯಾದರಗಳನ್ನು ತೋರಿದರು. ಮಾಜಿ ಸಚಿವ ಸೋಮಣ್ಣ, ಸಂಸದೆ ಶೋಭಾ ಕರಂದ್ಲಾಜೆ ಯಡಿಯೂರಪ್ಪನವರ ಜೊತೆಗಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: