
ಪ್ರಮುಖ ಸುದ್ದಿ
ಕಾರ್ಮಿಕ ಸಮ್ಮಾನ್ ದಿನಾಚರಣೆಯ ಪೂರ್ವಭಾವಿ ಸಭೆ
ರಾಜ್ಯ( ಮಡಿಕೇರಿ) ಫೆ.29 :- ಮಾರ್ಚ್ 1 ರಂದು ನಡೆಯಲಿರುವ ಕಾರ್ಮಿಕ ಸಮ್ಮಾನ್ ದಿನಾಚರಣೆಯ ಪೂರ್ವಭಾವಿ ಸಭೆಯು ಅಪರ ಜಿಲ್ಲಾಧಿಕಾರಿ ಡಾ ಸ್ನೇಹ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ತಾಲ್ಲೂಕು ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟಿ ಅವರು ಶ್ರಮ ಸಮ್ಮಾನ್ ಮತ್ತು ವಿಶೇಷ ಪುರಸ್ಕೃತ ಪ್ರಶಸ್ತಿಗೆ ಆಯ್ಕೆಗೊಂಡ ವಿವಿಧ 13 ವಲಯದ 90 ಅಸಂಘಟಿತ ಕಾರ್ಮಿಕರುಗಳ ಮಾಹಿತಿಯನ್ನು ಸಭೆಗೆ ಮಂಡಿಸಿ, ಅನುಮೋದನೆ ಪಡೆದರು.
ಬಳಿಕ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಿ.ವಿ.ಸ್ನೇಹಾ ಅವರು ಮಾರ್ಚ್, 1 ರಂದು ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ಮಾಡಿದರು. ಸಭೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಯ ಮುಖಂಡರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)