ಮೈಸೂರು

ಟೋಲ್ ಸಿಬ್ಬಂದಿಗಳ ಗೂಂಡಾ ವರ್ತನೆಗೆ ರೈತರ ಆಕ್ರೋಶ

ಮೈಸೂರು,ಫೆ.29:-  ಟೋಲ್ ಸಿಬ್ಬಂದಿಗಳ ಗೂಂಡಾ ವರ್ತನೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ  ಮೈಸೂರು ಜಿಲ್ಲೆ ತಿ.ನರಸೀಪುರ ಬಳಿ ಇರುವ ಯಡದೊರೆ ಟೋಲ್ ಬಳಿ ನಡೆದಿದೆ.

ಸಚಿವರು,ಶಾಸಕರ ಅನುಯಾಯಿಗಳಿಗೆ ಒಂದು ನ್ಯಾಯ ಜನಸಾಮಾನ್ಯರಿಗೆ ಒಂದು ನ್ಯಾಯನಾ ಎಂದು ರೈತರು ಪ್ರಶ್ನಿಸಿದ್ದಾರೆ.  ಅಲ್ಲಿ ಸಚಿವರು ಮಂತ್ರಿಗಳ ಹೆಸರು ಹೇಳಿದರೆ ಸಾಕು ಟೋಲ್ ಕಟ್ಟುವ ಅಗತ್ಯವಿಲ್ಲ  ಟೋಲ್ ಸಿಬ್ಬಂದಿ ಮತ್ತು ಮಂತ್ರಿ ಫಾಲೋವರ್ಸ್ ಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಪ್ರಶ್ನೆ ಮಾಡಲು ಹೋದ ಸಾರ್ವಜನಿಕರ ಬಳಿ ಟೋಲ್ ಸಿಬ್ಬಂದಿಗಳು ಅನುಚಿತ ವರ್ತನೆ ತೋರಿದ್ದು, ಟೋಲ್ ಸಿಬ್ಬಂದಿಗಳ ವರ್ತನೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: