ಮೈಸೂರು

ಪಾದಚಾರಿಗೆ ಗೂಡ್ಸ್ ಆಟೋ ಡಿಕ್ಕಿ : ಸಾವು

ಪಾದಚಾರಿಯೋರ್ವರಿಗೆ  ಗೂಡ್ಸ್ ಆಟೋ ಡಿಕ್ಕಿ  ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತರನ್ನು ಮೈಸೂರು ತಾಲೂಕಿನ ವರುಣ ಗ್ರಾಮದ ನಿವಾಸಿ ನಾರಾಯಣ (40) ಎಂದು ಗುರುತಿಸಲಾಗಿದೆ.

ವರುಣ ರಸ್ತೆಯ ಬ್ರಿಡ್ಜ್ ಬಳಿ ಇವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಗೂಡ್ಸ್ ಆಟೋ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ವರುಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: